ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಿಶ್ವ ಹೃದಯ ದಿನದ ಪ್ರಯುಕ್ತ ಮೆಗಾ ಜಾಥಾ; 1000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಜಾಗೃತಿ ಸಂದೇಶ

ಆದರ್ಶ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಆಶ್ರಯದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಮೆಗಾ ಜಾಥಾ ನಡೆಯಿತು.ಬೃಹತ್ ಜಾಥಾಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು.

ಜಾಥಾವು ಅಜ್ಜರಕಾಡು ಜೋಡುಕಟ್ಟೆ, ಬಿಗ್ ಬಜಾರ್, ಡಯಾನ ಸರ್ಕಲ್, ಕೆ.ಎಂ ಮಾರ್ಗದಲ್ಲಿ ಸಾಗಿ ಬಂದು ಕ್ಲಾಕ್ ಟವರ್‌ನಲ್ಲಿ ತಿರುವು ಪಡೆದು ಆದರ್ಶ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ವಿವಿಧ ನರ್ಸಿಂಗ್ ಕಾಲೇಜುಗಳ ಸುಮಾರು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಹೃದಯವನ್ನು ಸಂಕೇತಿಸುವ ರಕ್ತವರ್ಣದ ದಿರಿಸು ಧರಿಸಿ ಭಾಗವಹಿಸಿದರು. ಹೃದ್ರೋಗದ ಬಗ್ಗೆ ಮಾಹಿತಿ ನೀಡುವ ಹಾಗೂ ಜಾಗೃತಿ ಮೂಡಿಸುವ ವಿವಿಧ ಫಲಕಗಳ ಪ್ರದರ್ಶನ, ವ್ಯಾಯಾಮ, ಹೃದಯ ಸ್ತಂಭನವಾದಾಗ ಅನುಸರಿಸಬೇಕಾದ ಕ್ರಮಗಳ ಪ್ರಾತ್ಯಕ್ಷಿತೆಗಳನ್ನು ಈ ಸಂದರ್ಭ ನೀಡಲಾಯಿತು.

ವಿದ್ಯಾರ್ಥಿಗಳಲ್ಲದೆ ಜಾಥಾದಲ್ಲಿ ವೈದ್ಯರು, ಗಣ್ಯ ವ್ಯಕ್ತಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.ಇಂದು ಆದರ್ಶ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ, ರಕ್ತದ ಸಕ್ಕರೆ ಅಂಶ, ಕೊಬ್ಬಿನಾಂಶ ಹಾಗೂ ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಏರ್ಪಡಿಸಲಾಗಿದೆ.

Edited By :
PublicNext

PublicNext

01/10/2022 04:21 pm

Cinque Terre

29.59 K

Cinque Terre

0

ಸಂಬಂಧಿತ ಸುದ್ದಿ