ಮಣಿಪಾಲ: ಸೆಪ್ಟೆಂಬರ್ ತಿಂಗಳು ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು ಕೆಎಂಸಿ ಮಣಿಪಾಲ, ಬಾಲ್ಯದ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೇಣದಬತ್ತಿ ನಡಿಗೆ ಕಾರ್ಯಕ್ರಮ ಏರ್ಪಡಿಸಿತ್ತು. ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ,ಭಾರತದಲ್ಲಿ ಪ್ರತಿ ವರ್ಷ ಸುಮಾರು 78,000 ಮಕ್ಕಳು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ನಮ್ಮ ದೇಶದಲ್ಲಿ ವಿಳಂಬವಾಗಿ ಪತ್ತೆಮಾಡುವುದು, ನುರಿತ ತಜ್ಞರಲ್ಲಿಗೆ ಬರುವಾಗ ತಡವಾಗುವುದು ಮತ್ತು ಕ್ಯಾನ್ಸರ್ ಒಂದು ಕಳಂಕ ಎನ್ನುವ ಮನೋಬಾವದ ಕಾರಣದಿಂದ ಗುಣವಾಗುವ ದರದಲ್ಲಿ ಕಡಿಮೆ ಇದೆ ಎಂದರು.
ನಡಿಗೆಯು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಮುಖ್ಯ ದ್ವಾರದಿಂದ ಹೊರಟು ಟೈಗರ್ ಸರ್ಕಲ್ ಮೂಲಕ ಆಕ್ಸೆಸ್ಲೈಫ್ ಮಾಹೆ ಮಣಿಪಾಲದವರೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಭಾಗವಹಿಸಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಆರೈಕೆ ಮಾಡುವವರಿಗೆ ಬೆಂಬಲ ಸೂಚಿಸಿದರು.
PublicNext
24/09/2022 10:27 pm