ಮುಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಸಹಕಾರದಲ್ಲಿ ಗ್ರಾಮ ಒನ್ ಇವರ ಸಹಯೋಗದಲ್ಲಿ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ, ಕೊವಿಡ್ ಬೂಸ್ಟರ್ ಡೋಸ್ ಶಿಬಿರ ಯಶಸ್ವಿ ಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕೆಮ್ರಾಲ್ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಮಾತನಾಡಿ ಗ್ರಾಮೀಣ ಭಾಗದ ನಾಗರಿಕರ ಹಿತದೃಷ್ಟಿಯಿಂದ ಸರಕಾರ ಆನೇಕ ಯೋಜನೆಗಳನ್ನು ರೂಪಿಸಿದ್ದು ಸಾಕಾರಗೊಳಿಸಲು ಗ್ರಾಮಸ್ಥರ ಸಹಕಾರ ಅಗತ್ಯ ಎಂದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿಗಾರ್, ಮೆಲಿಟ ಡಿಸೋಜ, ಶಶಿ ಸುರೇಶ್, ರಾಜೇಶ್ ಶೆಟ್ಟಿ, ಮಯ್ಯದ್ದಿ, ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಸದಸ್ಯರಾದ ಸಿಪ್ರಿಯನ್ ಡಿಸೋಜ, ಜೋಸೆಫ್ ಕ್ವಾಡ್ರಸ್, ಪ್ರಕಾಶ್ ಡಿಸೋಜ, ಶೇಖರ್ ಪೂಜಾರಿ, ವಸಂತ್ ಶೆಟ್ಟಿಗಾರ್, ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.ಬಳಿಕ ಶಿಬಿರ ನಡೆಯಿತು.
Kshetra Samachara
24/09/2022 06:03 pm