ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ವಿದ್ಯಾರ್ಥಿನಿಯ ವೈದ್ಯಕೀಯ ಚಿಕಿತ್ಸೆಗೆ ದನ ಸಹಾಯ

ಮುಲ್ಕಿ:ಕಿನ್ನಿಗೋಳಿರೋಟರಿ ಅಂಗ್ಲ ಮಾದ್ಯಮ ಶಾಲೆಯ ನಾಲ್ಕನೇ ತರಗತಿ ವಿಧ್ಯಾರ್ಥಿನಿ ವಿನ್ಸಿಯಾ ಅನಾರೋಗ್ಯದಿಂದ ಬಲಳುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ ರೋಟರಿ ಕ್ಲಬ್ ಕಿನ್ನಿಗೋಳಿ, ರೋಟರಿ ಶಾಲಾ ಆಡಳಿತ ಮಂಡಳಿ, ಶಾಲೆಯ ವಿಧ್ಯಾರ್ಥಿಗಳು ಶಿಕ್ಷಕ ರಕ್ಷಕ ಸಂಘ, ಶಿಕ್ಷಕ ಶಿಕ್ಷಕೇತರರ ವತಿಯಿಂದ 1ಲಕ್ಷ 53 ಸಾವಿರ ರೂವನ್ನು ಬಾಲಕಿ ತಂದೆ ಬಾಮನ್ ರವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ರೋಟರಿ ಅಧ್ಯಕ್ಷ ದೇವಿದಾಸ್ ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಉಪಾಧ್ಯಕ್ಷ ಶೇಷರಾಮ ಶೆಟ್ಟಿ, ಕೋಶಾಧಿಕಾರಿ ಸತೀಶ್ಚಂದ್ರ ಹೆಗ್ಡೆ, ರೋಟರಿ ಕಾರ್ಯದರ್ಶಿ ಲಕ್ಷಣ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸದಾಶಿವ ನಾಯಕ್, ಮುಖ್ಯೋಪದ್ಯಾಯಿನಿ ಸುನೀತಾ, ಶಿಕ್ಷಕರು, ರೋಟರಿ ಸದಸ್ಯರು ಇದ್ದರು.

Edited By : PublicNext Desk
Kshetra Samachara

Kshetra Samachara

23/09/2022 08:17 pm

Cinque Terre

2.52 K

Cinque Terre

0

ಸಂಬಂಧಿತ ಸುದ್ದಿ