ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಶಾಲಾ ವಿದ್ಯಾರ್ಥಿಗೆ ಡೆಂಗ್ಯೂ ಜ್ವರ; ವೈದ್ಯಾಧಿಕಾರಿ ಭೇಟಿ ಪರಿಶೀಲನೆ, ಮುಂಜಾಗ್ರತೆಯ ನಿಮಿತ್ತ ಫಾಗಿಂಗ್

ಕಿನ್ನಿಗೊಳಿ:ಕಿನ್ನಿಗೋಳಿ ಪರಿಸರದ ಕೆಲವು ಶಾಲೆಗಳಲ್ಲಿ ಕಳೆದ ಹಲವು ದಿನಗಳಿಂದ ವೈರಲ್ ಜ್ವರ ಹಾಗೂ ಇಲಿ ಜ್ವರದ ಪ್ರಕರಣವು ಕಂಡು ಬಂದ ಹಿನ್ನಲೆಯಲ್ಲಿ ಕಿನ್ನಿಗೋಳಿ ರೋಟರಿ ಶಾಲೆಗೆ ಮೂರು ದಿನಗಳ ರಜೆ ಸಾರಲಾಗಿದ್ದು , ಪಠ್ಯ ಹಿನ್ನಡೆಯಾಗುವುರಿಂದ ಶುಕ್ರವಾರ ಶಾಲೆ ಆರಂಭಿಸಲಾಗಿದೆ.

ಆದರೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು.ವೈರಲ್ ಜ್ವರ ದಿಂದಾಗಿ ಕಿನ್ನಿಗೋಳಿ ಪರಿಸರದ ಹಲವು ಕ್ಲಿನಿಕ್‌ಗಳು ಹೌಸ್ ಪುಲ್ ಆಗಿದೆ. ಕಿನ್ನಿಗೋಳಿ ರೋಟರಿ ಶಾಲೆಯಲ್ಲಿ 60 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಜ್ವರ ಕಾಣಿಸಿಕೊಂಡಿರುವುದರಿಂದ ಶಾಲೆಗೆ ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಭಾಸ್ಕರ ಕೋಟ್ಯಾನ್ ಭೇಟಿ ನೀಡಿ ಜ್ವರ ಬಾಧೆ ಕಂಡು ಬಂದ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಹಾಗೂ ಮುಂಜಾಗ್ರತೆಯ ನಿಮಿತ್ತ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಿಂದ ಫಾಗಿಂಗ್ ಮಾಡಲಾಗಿದೆ. ಈ ನಡುವೆ ಕಿನ್ನಿಗೋಳಿ ಶಾಲಾ ವಿದ್ಯಾರ್ಥಿ ಓರ್ವರಿಗೆ ಡೆಂಗ್ಯೂ ಜ್ವರ ಬಂದಿದ್ದು ಗುಣ ಮುಖರಾಗಿದ್ದಾರೆ.

Edited By : Abhishek Kamoji
Kshetra Samachara

Kshetra Samachara

16/09/2022 08:45 pm

Cinque Terre

3.77 K

Cinque Terre

1

ಸಂಬಂಧಿತ ಸುದ್ದಿ