ಸುಳ್ಯ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರೋಟರಾಕ್ಟ್ ಕ್ಲಬ್ ಸುಳ್ಯ ವಿಕ್ರಮ ಯುವಕ ಮಂಡಲ ಜಯನಗರ, ವತಿಯಿಂದ ಹಳೆಗೇಟು ಮಿಲಿಟರಿ ಗ್ರೌಂಡ್ ನಿವಾಸಿಗಳ ಸಹಯೋಗದೊಂದಿಗೆ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಿಲಿಟರಿ ಗ್ರೌಂಡ್ ಪರಿಸರದಲ್ಲಿ ಭಾನುವಾರ ನಡೆಯಿತು.
ಹಿಂಡ್ ಲ್ಯಾಬ್ ವೈದ್ಯಾಧಿಕಾರಿಯಾದ ಡಾ.ರಾಜಿಕ್ ಆರೋಗ್ಯ ತಪಾಸಣೆ ಮಾಡಿದರು. ತಜ್ಞರುಗಳಾಗಿ ಅಭಿಜಿತ್, ಪದ್ಮಶ್ರೀ, ನಳಿನಿ, ಸಂಕೇತ್, ಸ್ವಪ್ನಶಾಲಿನಿ ಪೂರ್ಣಿಮಾ ಮತ್ತಿತರರು ಸಹಕರಿಸಿದರು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದರು.
ರೋಟರಾಕ್ಟ್ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ಪುವೇಂದ್ರನ್ ಕೂಟೇಲು ಉಪಸ್ಥಿತರಿದ್ದರು. ಹಿಂಡ್ ಲ್ಯಾಬ್ ನ ಜಿಲ್ಲಾ ಸಂಯೋಜಕ ಪಿ.ವಿ.ಸುಬ್ರಮಣಿ ಭೇಟಿ ನೀಡಿ ಪರಿಶೀಲಿಸಿದರು. ಶ್ರೀಮತಿ ವೀಣಾ ಯು, ಶ್ರೀಮತಿ ವೀಣಾ ನಂಬಿಯಾರ್ ಸಹಕರಿಸಿದರು.
Kshetra Samachara
13/09/2022 08:21 am