ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಕ್ಕಳ ಆತ್ಮಹತ್ಯೆ ಹೆಚ್ಚಳ ಕಳವಳಕಾರಿ: ಮನೋವೈದ್ಯ ಡಾ.ಪಿ.ವಿ ಭಂಡಾರಿ

ಉಡುಪಿ: ಮಕ್ಕಳು ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿರುವುದು ಬೇಸರದ ಸಂಗತಿ‌ ಮತ್ತು ಕಳವಳಕಾರಿ ವಿಚಾರ ಎಂದು ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಆತ್ಮಹತ್ಯೆ ತಡೆ ದಿನಾಚರಣೆ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ಮಾಹಿತಿ ಕಾರ್ಯಾಗಾರ ಬಳಿಕ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದರು.ದೇಶದಲ್ಲಿ 15 ವರ್ಷದಿಂದ 25 ವರ್ಷದವರೆಗಿನ ಸುಮಾರು 28 ಮಕ್ಕಳು ಪ್ರತಿದಿನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಕಡಿಮೆ ಅಂಕ ,ಪರೀಕ್ಷೆಯಲ್ಲಿ ಅನುತ್ತೀರ್ಣ ,ಪ್ರೇಮ ವೈಫಲ್ಯ ,ಹೆತ್ತವರಿಂದ ಒತ್ತಡ ಹೀಗೆ ಹಲವು ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಸಮಾಜದ ಪ್ರತೀ ಪ್ರಜೆಯ ಮೇಲೂ ಇದನ್ನು ತಡೆಗಟ್ಟುವ ಸಾಮಾಜಿಕ ಜವಾಬ್ದಾರಿ ಇದೆ.ವೈದ್ಯರು ,ಮನೋವೈದ್ಯರು ಮತ್ತು ಶಿಕ್ಷಕರಿಂದ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಮತ್ತು ಸರಕಾರ ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡಬೇಕಾಗಿದೆ.ಇದಕ್ಕಿರುವ ಕಾರಣಗಳನ್ನು ತಿಳಿದುಕೊಂಡು ಇದನ್ನು ತಡೆಗಟ್ಟುವ ಕೆಲಸ ಆಗಬೇಕು.ಮುಖ್ಯವಾಗಿ ಮಾನಸಿಕ‌ ಚಿಕಿತ್ಸೆ ಜನರಿಗೆ ಸಿಗುವಂತಾಗಬೇಕು.ಇದಕ್ಕೆ ಸರಕಾರ ಮೀಸಲಿಡುವ ಹಣವೂ ತೀರಾ ಕಡಿಮೆ.ಅಗತ್ಯವಿರುವ ಪ್ರತಿ ಪ್ರಜೆಗೂ ಮಾನಸಿಕ ಚಿಕಿತ್ಸೆಯನ್ನು ನೀಡಬೇಕಾದ ಜವಾಬ್ದಾರಿ ಜನಪ್ರತಿನಿಧಿಗಳು‌ ಮತ್ತು ಸರಕಾರಗಳ‌ ಮೇಲಿವೆ ಎಂದು ಅವರು ಹೇಳಿದ್ದಾರೆ.

Edited By : Manjunath H D
PublicNext

PublicNext

09/09/2022 03:24 pm

Cinque Terre

40.19 K

Cinque Terre

3

ಸಂಬಂಧಿತ ಸುದ್ದಿ