ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತಿರೇಕದಿಂದ ವರ್ತಿಸದಿರಿ: ವಿದ್ಯಾರ್ಥಿಗಳಿಗೆ ಕಿವಿಮಾತು

ಬಂಟ್ವಾಳ: ಇತ್ತೀಚಿನ ದಿನಗಳಲ್ಲಿ ಕಾಲೇಜು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳು ಅತಿರೇಕದಿಂದ ವರ್ತಿಸುವ ಘಟನೆಗಳು ವರದಿಯಾಗುತ್ತಿದ್ದು, ಅತಿರೇಕದ ವರ್ತನೆ ಬೇಡ, ಸ್ವಸ್ಥ ಸಮಾಜದೆಡೆ ಸಾಗೋಣ ಎಂದು ಬಂಟ್ವಾಳದಲ್ಲಿ ನಡೆದ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಪಶ್ಚಿಮ ವಿಭಾದ ಕ್ಯಾಂಪಸ್ ಅಸೆಂಬ್ಲಿ ಏಕದಿನ ಶಿಬಿರದಲ್ಲಿ ಹಿರಿಯರು ಕಿವಿಮಾತು ಹೇಳಿದರು.

ಕಾಲೇಜು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳು ಅತಿರೇಕದಿಂದ ವರ್ತಿಸುವ ಘಟನೆಗಳು ವರದಿಯಾಗುತ್ತಿದ್ದು, ಮುಸ್ಲಿಂ ವಿದ್ಯಾರ್ಥಿಗಳು ಈ ರೀತಿಯಾಗಿ ವರ್ತಿಸಬಾರದು ಎಂದು ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ವಿಭಾಗದ ವತಿಯಿಂದ ಇಂದು ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಅಸೆಂಬ್ಲಿ ಎಂಬ ಏಕದಿನ ಶಿಬಿರ ನಡೆಯಿತು.

ನೈತಿಕತೆ, ಸಮಗ್ರತೆ ಮತ್ತು ಸಮರ್ಪಣೆ ಎಂಬ ವಿಚಾರವಾಗಿ ಶಿಬಿರ ನಡೆದಿದ್ದು, ಶಿಬಿರದಲ್ಲಿ ವಿವಿಧ ವಿಚಾರಗಳ ಕುರಿತಾಗಿ ವಿಷಯ ಮಂಡನೆ ನಡೆಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶುಭ ಆಶೀರ್ವಾದ ನೀಡಿದರು. ಇದೇ ವೇಳೆ ಕರ್ನಾಟಕ ವಕ್ಫ್ ಬೋರ್ಡ್ ಚಯರ್ ಮ್ಯಾನ್ ಶಾಫಿ ಸಅದಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ನೂತನ ಆ್ಯಂಬುಲೆನ್ಸ್ ಕೀಲಿ ಕೈ ಹಸ್ತಾಂತರಿಸಲಾಯಿತು.ನವಾಝ್ ಸಖಾಫಿ ಅಡ್ಯಾರ್ ಅಧ್ಯಕ್ಷತೆ ವಹಿಸಿದ್ದರು.

Edited By : Somashekar
Kshetra Samachara

Kshetra Samachara

25/07/2022 12:09 pm

Cinque Terre

10.25 K

Cinque Terre

1

ಸಂಬಂಧಿತ ಸುದ್ದಿ