ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಗೆ 100 ಬೆಡ್ ಸಾಮರ್ಥ್ಯದ ಇಎಸ್ ಐ ಆಸ್ಪತ್ರೆ ಮಂಜೂರು -ಶಾಸಕ ರಘುಪತಿ ಭಟ್ ಹರ್ಷ

ಉಡುಪಿ: ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ದೇಶದಾದ್ಯಂತ 23 ಇಎಸ್ ಐ ಆಸ್ಪತ್ರೆ ಮಂಜೂರು ಮಾಡಿದ್ದು, ಉಡುಪಿಗೆ 100 ಬೆಡ್ ಸಾಮರ್ಥ್ಯದ ಇಎಸ್ಐ ಆಸ್ಪತ್ರೆ ಮಂಜೂರು ಮಾಡಲಾಗಿದೆ.

ಇಎಸ್ಐ ಆಸ್ಪತ್ರೆ ಉಡುಪಿ ಭಾಗದ ಜನತೆಯ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಉಡುಪಿಗೆ 100 ಬೆಡ್ ಸಾಮರ್ಥ್ಯದ ಇಎಸ್ ಐ ಆಸ್ಪತ್ರೆ ಮಂಜೂರು ಮಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭುಪೇಂದ್ರ ಯಾದವ್ ಹಾಗೂ ಈ ಬಗ್ಗೆ ಶ್ರಮ ವಹಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿಯ ಸಮಸ್ತ ಜನತೆಯ ಪರವಾಗಿ ಶಾಸಕ ಶ್ರೀ ಕೆ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

15/07/2022 05:53 pm

Cinque Terre

2.89 K

Cinque Terre

0

ಸಂಬಂಧಿತ ಸುದ್ದಿ