ಉಡುಪಿ : ಕೇಂದ್ರ ಸರಕಾರದ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿಯೂ ಬೂಸ್ಟರ್ ಡೋಸ್ ಉಚಿತ ವಿತರಣೆ ನಡೆಯಲಿದ್ದು ಜು, 18ರಂದು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಉಚಿತ ಬೂಸ್ಟರ್ ಡೋಸ್ ಲಭ್ಯವಿರಲಿದೆ. ಜಿಲ್ಲೆಯಲ್ಲಿ ಇದುವರೆಗೆ 10,88,995 ಮಂದಿ ಮೊದಲ ಬಾರಿಗೆ ಹಾಗೂ 10,79,305 ಮಂದಿ ಎರಡನೇ ಬಾರಿಗೆ ಲಸಿಕೆ ಪಡೆದುಕೊಂಡಿದ್ದಾರೆ. 1,23,975 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡಿದ್ದಾರೆ.
Kshetra Samachara
15/07/2022 05:45 pm