ಉಡುಪಿ: ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ದೇಶದಾದ್ಯಂತ 23 ಇಎಸ್‌ಐ ಆಸ್ಪತ್ರೆಗಳನ್ನು ಮಂಜೂರು ಮಾಡಿದ್ದು, ಇವುಗಳಲ್ಲಿ ಉಡುಪಿಗೂ 100 ಹಾಸಿಗೆ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆ ಮಂಜೂರುಗೊಂಡಿದೆ. ಇದರೊಂದಿಗೆ ದೇಶಾದ್ಯಂತ 62 ನೂತನ ಡಿಸ್ಪೆನ್ಸರಿಗಳನ್ನು ಸಹ ಪ್ರಾರಂಭಿಸಲಾಗುತ್ತದೆ.
ಉಡುಪಿಗೆ ಮಂಜೂರಾಗಿರುವ ಇಎಸ್‌ಐ ಆಸ್ಪತ್ರೆಯನ್ನು ಇಎಸ್‌ಐ ಕಾರ್ಪೋರೇಷನ್ ನಡೆಸಿದರೆ, ತುಮಕೂರಿನ ಇಎಸ್‌ಐ ಆಸ್ಪತ್ರೆಯನ್ನು ರಾಜ್ಯ ಸರಕಾರ ನಿರ್ವಹಿಸಲು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಹರ್ಯಾಣದ ನಾಲ್ಕು, ಛತ್ತೀಸ್‌ಗಢ ಮತ್ತು ಒರಿಸ್ಸಾ ಆಸ್ಪತ್ರೆಗಳನ್ನು ಆಯಾ ರಾಜ್ಯ ಸರಕಾರ ನಿರ್ವಹಿಸಲಿವೆ.
ಇಎಸ್‌ಐ ಆಸ್ಪತ್ರೆ ಉಡುಪಿ ಭಾಗದ ಜನತೆಯ ಹಲವಾರು ವರ್ಷಗಳ ಬೇಡಿಕೆಯಾಗಿದ್ದು, ಇದೀಗ ಉಡುಪಿಗೆ 100 ಬೆಡ್ ಸಾಮರ್ಥ್ಯದ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭುಪೇಂದ್ರ ಯಾದವ್ ಅವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೃತಜ್ಞತೆ ಸಲ್ಲಿಸಿದ್ದಾರೆ.
Kshetra Samachara
14/07/2022 08:27 pm