ಮುಲ್ಕಿ: ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳು ಗ್ರಾಮಾಂತರ ಜನರಿಗೆ ಸಹಕಾರಿಯಾಗಿದ್ದು ಸದುಪಯೋಗ ಪಡಿಸಿಕೊಳ್ಳಿ ಎಂದು ಸುಮುದಾಯ ಆರೋಗ್ಯ ಅಧಿಕಾರಿ ಶರ್ಲಿನ್ ಹೇಳಿದರು.
ಅವರು ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದಲ್ಲಿ ಅತ್ತೂರು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಅಸಾಕ್ರಾಮಿಕ ರೋಗಗಳ ತಪಾಸಣೆ ಶಿಬಿರದಲ್ಲಿ ಮಾಹಿತಿ ನೀಡಿ ಮಾತಾನಡಿದರು.
ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ದಿನೇಶ್ ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿಗಾರ್, ಆಶಾಕಾರ್ಯಕರ್ತೆಯರಾದ ಮಂಜುಳಾ, ಸುಪ್ರಭಾ , ಶಶಿಕಲಾ ಉಪಸ್ಥಿರಿದ್ದರು. 100ಕ್ಕೂ ಮಿಕ್ಕಿ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.
Kshetra Samachara
28/06/2022 08:32 pm