ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ವಿಶೇಷಚೇತನರಿಗೆ ಸಾಧನ ಸಲಕರಣೆ ವಿತರಿಸಲು ಪೂರ್ವಭಾವಿ ತಪಾಸಣಾ ಶಿಬಿರ

ಬೈಂದೂರು: ಕೇಂದ್ರ ಸರಕಾರದ ಲೋಕಸಭಾ ಸದಸ್ಯರ ನಿಧಿ ಅನುದಾನದಡಿಯಲ್ಲಿ ಕೇಂದ್ರ ಸರಕಾರದ ಎಡಿಐಪಿ ಯೋಜನೆಯಡಿಯಲ್ಲಿ ಗುರುತಿಸಲ್ಪಡುವ ವಿಶೇಷಚೇತನರಿಗೆ ಎಲ್ಲಾ ರೀತಿಯ ಸಾಧನ ಸಲಕರಣೆ ವಿತರಿಸುವ ಸಲುವಾಗಿ ಪೂರ್ವಭಾವಿ ತಪಾಸಣಾ ಶಿಬಿರವನ್ನು ಜಿಲ್ಲೆಯಾದ್ಯಂತ ಗುರುತಿಸಿದ ಸ್ಥಳಗಳಲ್ಲಿ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ಇಲಾಖೆ ಹಿರಿಯ ನಾಗರಿಕರ ಮತ್ತು ವಿಶೇಷಚೇತನರ ಕಲ್ಯಾಣ ಇಲಾಖೆ ಜಿಲ್ಲಾ ವಿಶೇಷಚೇತನರ ಪುನರ್ವಸತಿ ಕೇಂದ್ರ ಅಲಿಮ್ಕೋ ಆಫ್ ಇಂಡಿಯಾ ಸಂಪೂರ್ಣ ಸಹಕಾರದೊಂದಿಗೆ ತಪಾಸಣಾ ಶಿಬಿರವು ನಡೆಯುತ್ತಿದೆ.

ಈ ಸಂದರ್ಭದಲ್ಲಿ ಬೈಂದೂರು ತಹಶೀಲ್ದಾರ್ ಶಾಲಾ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು ಡಿಡಿಆರ್‌ಸಿ ಸಮನ್ವಯಾಧಿಕಾರಿ ಪಂಚಾಯತ್ ಸದಸ್ಯರು ಐಇಆರ್‌ಟಿ ಅಲಿಮ್ಕೋ ಸಿಬ್ಬಂದಿ ಕೆಎಂಸಿ ಮಣಿಪಾಲ ಸಿಬ್ಬಂದಿಗಳು ಆರೋಗ್ಯ ಇಲಾಖೆ ಸಿಬ್ಬಂದಿಗಳು ಎಂಆರ್‌ಡಬ್ಲ್ಯೂ ವಿಆರ್‌ಡಬ್ಲ್ಯೂ ಉಪಸ್ಥಿತರಿದ್ದು ಪೂರ್ವಭಾವಿ ತಪಾಸಣಾ ಶಿಬಿರವನ್ನು ಇಂದು ಬೈಂದೂರು ತಾಲೂಕಿನ ನಾವುಂದ ಸ.ಹಿ.ಪ್ರಾ ಶಾಲೆಯಲ್ಲಿ ನಡೆಸಲಾಯಿತು.

Edited By : Nagesh Gaonkar
Kshetra Samachara

Kshetra Samachara

20/06/2022 06:42 pm

Cinque Terre

5.03 K

Cinque Terre

0

ಸಂಬಂಧಿತ ಸುದ್ದಿ