ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 25 ವರ್ಷಗಳಿಂದ ಕಣ್ಮರೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ !

ಉಡುಪಿ: ಮನೆ ಬಿಟ್ಟು ಕಳೆದ 25 ವರ್ಷಗಳಿಂದ ಅಜ್ಞಾತವಾಗಿದ್ದ ವ್ಯಕ್ತಿಯೊಬ್ಬರು ಮನೆ ಮಂದಿಗೆ ಶವವಾಗಿ ಸಿಕ್ಕದ ಘಟನೆ ನಡೆದಿದೆ.ಮೃತ ವ್ಯಕ್ತಿ ಬಾರ್ಕೂರಿನ ನಿವಾಸಿ ಬಾಬು ಮರಕಾಲ ಎಂದು ತಿಳಿದು ಬಂದಿದೆ.

ಉಡುಪಿಯ ಹಳೆ ಸರಕಾರಿ ಬಸ್ ನಿಲ್ದಾಣದಲ್ಲಿ ಕಳೆದ ಮೇ.ಒಂದರಂದು ಬಾಬು ಮರಕಾಲ ಅಸ್ವಸ್ಥಗೊಂಡಿದ್ದರು.ಇವರನ್ನು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.ಕೆಲವು ದಿನಗಳ ಬಳಿಕ ವೃದ್ಧರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿಡಲಾಗಿತ್ತು.

ಇದೀಗ ಸಂಬಂಧಿಕರಿಗೆ ಬಾಬು ಮರಕಾಲ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ.ಆ ಬಳಿಕ ಸಂಬಂಧಿಕರು ಆಸ್ಪತ್ರೆಯನ್ನು ಸಂಪರ್ಕಿಸಿ ಕಾನೂನು ಪ್ರಕ್ರಿಯೆ ಮೂಲಕ ಶವವನ್ನು ಪಡೆದುಕೊಂಡರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಾಯದಿಂದ ಅಂತ್ಯಸಂಸ್ಕಾರವನ್ನೂ ನಡೆಸಿದ್ದಾರೆ.ಇವರು ,ಕಳೆದ 25 ವರ್ಷಷಗಳಿಂದ ಯಾವುದೋ ಕಾರಣಕ್ಕೆ ನಾಪತ್ತೆಯಾಗಿದ್ದಾಗಿ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

Edited By :
Kshetra Samachara

Kshetra Samachara

20/06/2022 03:21 pm

Cinque Terre

4.16 K

Cinque Terre

0