ಮುಲ್ಕಿ: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆಗಳಿದ್ದು ಆರೋಗ್ಯ ಶಿಬಿರದ ಮೂಲಕ ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಸುಮಾ ಹೇಳಿದರು. ಕೆಂಚನಕೆರೆಯಲ್ಲಿ ಅತ್ತೂರು- ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕಿಲ್ಪಾಡಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಶನಿವಾರ ಜರಗಿದ ಎನ್ ಸಿ ಡಿ ಕ್ಯಾಂಪ್ ( ಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರದಲ್ಲಿ )ದಲ್ಲಿ ಮಾತನಾಡಿದರು.
ಸಮುದಾಯ ಆರೋಗ್ಯಾಧಿಕಾರಿ ಶೆರ್ಲಿನ್ ಮಾಹಿತಿ ನೀಡಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲದಲ್ಲಿ ಡೆಂಗ್ಯು, ಮೆಲೇರಿಯಾ ದಂತಹ ಜ್ವರ ಕಾಯಿಲೆಗಳು ಕಾಣಿಸಿಕೊಂಡಿದ್ದು ರೋಗದ ಲಕ್ಷಣಗಳು ಗೋಚರಿಸಿದರೆ ತಕ್ಷಣ ತಪಾಸಣೆ ಹಾಗೂ ಮಾಹಿತಿ ನೀಡಬೇಕು. ಕುದಿಸಿದ ನೀರು ಉತ್ತಮ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆಯರಾದ ಮಂಜುಳಾ, ಸುಪ್ರಭಾ ಮತ್ತಿತರರು ಉಪಸ್ತಿತರಿದ್ದರು. ಶಿಬಿರದಲ್ಲಿ ೫೦ ಕ್ಕೂ ಮಿಕ್ಕಿ ಜನರು ಪ್ರಯೋಜನ ಪಡೆದರು.
Kshetra Samachara
21/05/2022 05:28 pm