ಉಡುಪಿ: ಉಡುಪಿಯಲ್ಲಿ ಟೊಮೆಟೊ ಫ್ಲೂ ವದಂತಿ ವಿಚಾರವಾಗಿ ಮಾತನಾಡಿರುವ ಉಡುಪಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ , ಟೊಮೆಟೊ ಫ್ಲೂ ಬಗ್ಗೆ ಪೋಷಕರು ಎಚ್ಚರವಾಗಿರಿ, ಭಯ ಬೇಡ.ಉಡುಪಿಯಲ್ಲಿ ಟೊಮೆಟೊ ಫ್ಲೂ ಪತ್ತೆ ಆಗಿಲ್ಲ.ಈ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಹೇಳಿದ್ದಾರೆ.
ಮಕ್ಕಳಲ್ಲಿ ಫುಟ್ ಅಂಡ್ ಮೌಥ್ ಪ್ರಕರಣ ಬರುವುದು ಸಾಮಾನ್ಯ ಎಂದ ಅವರು ,ಜನವರಿ-ಫೆಬ್ರವರಿ ತಿಂಗಳಿಂದಲೇ ಈ ಸೋಂಕು ಮಕ್ಕಳಲ್ಲಿ ಇತ್ತು.ಈ ಮೊದಲೇ ಸ್ಯಾಂಪಲ್ ತೆಗೆದು ಪರೀಕ್ಷೆ ನಡೆಸಿದ್ದೇವೆ.ಉಡುಪಿಯಲ್ಲಿ ಪತ್ತೆಯಾಗಿರುವುದು ಫುಟ್ ಅಂಡ್ ಮೌಥ್ ಎಂದು ಖಾತ್ರಿಯಾಗಿದೆ ಎಂದರು.
ಉಡುಪಿಯಲ್ಲಿ ಪತ್ತೆಯಾಗಿರುವುದು ಟೊಮೆಟೊ ಫ್ಲೂನ ಮತ್ತೊಂದು ಪ್ರಭೇದ ಎಂದು ಹೇಳಿದ ಅವರು,
ಟೊಮೆಟೊ ಫ್ಲೂ ಕೂಡ ಇದೇ ರೀತಿ ಬರುತ್ತೆ.ಜ್ವರ ಮತ್ತು ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
ಫುಟ್ ಅಂಡ್ ಮೌಥ್ ನಲ್ಲಿ ಚಿಕ್ಕ ಗುಳ್ಳೆಗಳು ಕಾಣಿಸಿಕೊಳ್ಳುತ್ತೆ.
ಆದರೆ ಟೊಮೆಟೊ ಫ್ಲೂ ನಲ್ಲಿ ದೊಡ್ಡಗಾತ್ರದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.ಇಂತಹ ಟೊಮೆಟೊ ಫ್ಲೂ ಕೇಸುಗಳು ನಮ್ಮಲ್ಲಿ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Kshetra Samachara
16/05/2022 07:27 pm