ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ರೆಟಿನಾ ಕ್ಲಿನಿಕ್ ಉದ್ಟಾಟನೆ; ಅಭಯ ಪುನರ್ವಸತಿ ಕೇಂದ್ರದ ವಾರ್ಷಿಕೋತ್ಸವ

ಹಾರಾಡಿ: ರೆಟಿನಾ ಕ್ಲಿನಿಕ್ ನ ಉದ್ಘಾಟನೆ ಹಾಗೂ ಅಭಯ ಪುನರ್ವಸತಿ ಕೇಂದ್ರದ ವಾರ್ಷಿಕೋತ್ಸವ ಸಮಾರಂಭವನ್ನು ಡಾ. ಎ.ವಿ.ಬಾಳಿಗಾರವ ಜನ್ಮದಿನದ ಪ್ರಯುಕ್ತ ಹಮ್ಮಿಕೊಳ್ಳಲಾಯಿತು.

ಕಮಲ್ ಎ ಬಾಳಿಗ ಮೆಡಿಕಲ್ ಸೆಂಟರ್ ನಲ್ಲಿ ರೆಟಿನಾ ಕ್ಲಿನಿಕ್ ನ ಉದ್ಘಾಟನೆಯನ್ನು ಕೌಶಲ್ ವೋರ್, ವ್ಯವಸ್ಥಪಾಕ ನಿರ್ದೇಶಕರು, ಮೇಸಲಿ ಇಂಡಿಯಾ ಪ್ಯಾಕೇಜಿಂಗ್ ಪ್ರೆ.ಲಿ.ಉಡುಪಿ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ. ಎ.ವಿ.ಬಾಳಿಗಾ ಹಾಗೂ ಕಮಲ್ ಎ. ಬಾಳಿಗಾರವರ ಪ್ರತಿಮೆಗಳಿಗೆ ಕೌಶಲ್ ವೋರ್ ಹಾಗೂ ಮಂಜೇಶ್ವರ್ ಸುರೇಶ್ ಪ್ರಭು ನಿವೃತ ತಾಂತ್ರಿಕ ಉಪನಿರ್ದೇಶಕರು, ಮತ್ತು ಸಿ,ಇ,ಓ. ಜಿ.ಸಿ.ಸಿ. ಮಣಿಪಾಲ ಇವರು ಹೂವಿನ ಹಾರವನ್ನು ಹಾಕುವ ಮೂಲಕ ಗೌರವ ಸೂಚಿಸಿದರು.

ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕೌಶಲ್ ವೋರ್ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬ್ರಹ್ಮಾವರ ತಾಲ್ಲೂಕಿನ ತಹಶಿಲ್ದಾರ್ ರಾಜಶೇಖರ್ ಮೂರ್ತಿಯವರು ಡಾ. ಎ.ವಿ.ಬಾಳಿಗಾರವರು ದೇಶಕ್ಕೆ ನೀಡಿದ ಕೂಡುಗೆಯ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ನಡೆಸುವ ಹಲವು ಸಮಾಜಮುಖಿ ಕಾರ್ಯಕ್ರಮಗಳಿಗೆ ಧನ ಸಹಾಯವನ್ನು ಮಾಡಿರುವ ಅಮಿತಾ ಪೈ, ಸ್ಥಾಪಕರು, ಒನ್ ಗುಡ್ ಸ್ಟೆಪ್, ಬೆಂಗಳೂರು, ರಾಮ್ ಕೆದಿಲಾಯ, ಸಿ.ಇ.ಓ. ಮತ್ತು ಸ್ಥಾಪಕರು, ಟೀಮೈನಸ್, ಕ್ಯಾಲೀಪೂರ್ನಿಯಾ ಯು.ಎಸ್.ಎ. ಮಂಜೇಶ್ವರ್ ಸುರೇಶ್ ಪ್ರಭು ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಮ್ ಕೆದಿಲಾಯ , ವೆಂಕಟೇಶ್ ಕೆದಿಲಾಯ, ಅಮಿತಾ ಪೈ, ಡಾ. ಲಾವಣ್ಯ ಜಿಲ್ ರಾವ್ ಉಪಸ್ಥಿತರಿದ್ದರು, ಡಾ. ಎ.ವಿ.ಬಾಳಿಗಾ ಚಾರೀಟಿಸ್ ನ ವಿಶ್ವಸ್ಥರಾದ ಡಾ. ಆರ್.ವಿ.ಬಾಳಿಗಾ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಸಂಸ್ಥೆಯ ನಿರ್ದೇಶಕರಾದ, ಡಾ. ಪಿ.ವಿ.ಭಂಡಾರಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ಸಂಸ್ಥೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಯವರು ಧನ್ಯವಾದ ಸಮರ್ಪಣೆಯನ್ನು ನೆರವೇರಿಸಿಕೊಟ್ಟರು. ಕಾರ್ಯಕ್ರಮವನ್ನು ಪದ್ಮ ರಾಘವೇಂದ್ರ ಹಾಗೂ ಅಕ್ಷಯಾ  ಪ್ರಕಾಶ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

27/04/2022 12:33 pm

Cinque Terre

3.36 K

Cinque Terre

0

ಸಂಬಂಧಿತ ಸುದ್ದಿ