ಮುಲ್ಕಿ: ಗ್ರಾಮೀಣ ಪ್ರದೇಶದ ಬೀಡಿ ಕಾರ್ಮಿಕರ ಆರೋಗ್ಯ ಹಿತ ದೃಷ್ಠಿಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಆರೋಗ್ಯ ಶಿಭಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕರ ಕ್ಷೇಮಾಭಿವೃದ್ಧಿ ಆಸ್ಪತ್ರೆ ಕೈಕಂಬದ ಮುಖ್ಯ ವೈದ್ಯಾಧಿಕಾರಿ ಡಾ. ರಾಮಕೃಷ್ಣ ಭಟ್ ಹೇಳಿದರು.
ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ಭಾರತ ಸರಕಾರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಕೇಂದ್ರ ಕಾರ್ಮಿಕ ಕಲ್ಯಾಣ ಸಂಸ್ಥೆ ಬೆಂಗಳೂರು, ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಆಸ್ಪತ್ರೆ ಕೈಕಂಬ ಮತ್ತು ಕಾಟಿಪಳ್ಳ ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದಿರೆ ಮತ್ತು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ ಮೂಡಬಿದಿರೆ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ. ಕಾರ್ನಾಡ್ ಸದಾಶಿವ ರಾವ್ ಇವರ ಸ್ಮರಾಣಾರ್ಥ ಬೃಹತ್ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಮುಲ್ಕಿಯ ಭಾರತ್ ಬೀಡಿ ಸಂಸ್ಥೆಯ ಪ್ರಭಂದಕ ವಿಶ್ವನಾಥ್ ಉದ್ಘಾಟಿಸಿದರು. ಈ ಸಂದರ್ಭ ಆಯುಷ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯದರ್ಶಿ ಡಾ. ಶ್ರೀದೇವಿ ಆರ್ ಭಟ್, ಮುಲ್ಕಿ ಗಣೇಶ್ ಬೀಡಿ ಪ್ರಭಂದಕ ವಿಶ್ವನಾಥ ಶೆಣೈ, ಆಳ್ವಾಸ್ ಕಾಲೇಜು ವೈದ್ಯಾಧಿಕಾರಿ ಡಾ.ಹರಿಹರ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್, ಕಾರ್ಮಿಕರ ಕ್ಷೇಮಾಭಿವೃದ್ಧಿ ಆಸ್ಪತ್ರೆ ಕೈಕಂಬ ಇಲ್ಲಿ ವೈದ್ಯರಾದ ಡಾ. ಆದರ್ಶ, ದೇರಳಕಟ್ಟೆ ಮೆಡಿಕಲ್ ಆಫಿಸರ್ ಡಾ.ಭಾಗ್ಯಲಕ್ಷ್ಮಿ, ಮಂಗಳೂರು ಜಿಲ್ಲಾ ಕ್ಷಯರೋಗ ಕೇಂದ್ರದ ಮನೋಜ್ ಕೆ,ಬೀಡಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಬ್ದುಲ್ ಖಾದರ್, ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ.ವೈಶಾಲಿ ಕೋಡಿಕಲ್ ಹಾಜರಿದ್ದರು.
Kshetra Samachara
27/03/2022 04:06 pm