ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಡ್ಡೋಡಿ: "ಆರೋಗ್ಯ ಶಿಬಿರಗಳು ಗ್ರಾಮೀಣ ಜನರಿಗೆ ಸಹಕಾರಿ"

ಮುಲ್ಕಿ: ಮಂಗಳೂರು ಎ.ಜೆ ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಮತ್ತು ಶ್ರೀ ಕಟೀಲು ವಿವಿದ್ದೋದೇಶ ಸಹಕಾರಿ ಸಂಘ ಸಹಕಾರದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ನಿಡ್ದೋಡಿ ಸೌಂದರ್ಯ ರೇಸಾರ್ಟ್ ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರವನ್ನು ಕಟೀಲು ಸೌಂದರ್ಯ ರೆಸಾರ್ಟ್ ಮಾಲೀಕ ರಮೇಶ್ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯಕ್ಕೆ ಮಹತ್ವ ನೀಡುವ ದೃಷ್ಟಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದ್ದು ಜನತೆ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭ ಕಟೀಲು ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪುಷ್ಪಾ , ಪ್ರಶಾಂತ್ ಶೆಟ್ಟಿ,ನಿಡ್ಡೋಡಿ ಗ್ರಾ ಪಂ ಸದಸ್ಯ ಸಂಜೀವ ಪೂಜಾರಿ, ಕಟೀಲು ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ, ವೈದ್ಯಾಧಿಕಾರಿಗಳಾದ ಡಾ. ಆಕಾಂಕ್ಷ್, ಡಾ. ಅನುರಾಧ, ಡಾ. ಶ್ಯಾಮ್, ಡಾ. ರೋಶನಿ, ಡಾ. ಶೈಲಾ ಲೋಬೊ, ಡಾ.ಶ್ರೀನಿವಾಸ್, ಡಾ. ಚೈತ್ರ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

Edited By : PublicNext Desk
Kshetra Samachara

Kshetra Samachara

26/03/2022 12:24 pm

Cinque Terre

3.84 K

Cinque Terre

0