ಮಣಿಪಾಲ: ವಿಶ್ವ ಕ್ಷಯ ರೋಗ ದಿನಾಚರಣೆಯ ಅಂಗವಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ, ಮ್ಯಾಕ್ ಐಡಿ, ಹಾಗೂ ಪಿಎಸ್‌ಪಿಎಚ್ ಮಾಹೆ ಮಣಿಪಾಲದ ವತಿಯಿಂದ ಕ್ಷಯ ರೋಗದ ಕುರಿತು ಜಾಗೃತಿ ಕಲಾಕೃತಿ ಅನಾವರಣ ಇಂದು ನಡೆಯಿತು.
ಸಮುದಾಯ ವೈದ್ಯಕೀಯ ವಿಭಾಗದ ಕಲಾವಿದ ಶ್ರೀನಾಥ್ ಮಣಿಪಾಲ ಹಾಗೂ 2019ರ ವೈದ್ಯಕೀಯ ವಿದ್ಯಾರ್ಥಿಗಳು ರಚಿಸಿದ ಕ್ಷಯರೋಗ ಜಾಗೃತಿ ಕಲಾಕೃತಿಯನ್ನು ಕೆಎಂಸಿಯ ಡೀನ್ ಡಾ ಶರತ್ ರಾವ್ ಹಾಗೂ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್ ಅನಾವರಣಗೊಳಿಸಿದರು.
Kshetra Samachara
24/03/2022 09:08 pm