ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ಕೃಷಿ ಮೇಳ ದ ಕೃಷಿ ಸಿರಿ 2022ರ ವೇದಿಕೆಯಲ್ಲಿ ಜಲ ಸಂರಕ್ಷಣೆ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಜಲ ಸಂರಕ್ಷಣೆ ವಿಚಾರಗೋಷ್ಠಿಯಲ್ಲಿ ಸರಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ಜಗದೀಶ್ ಬಾಳ ಮಾತನಾಡಿ ಜಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ, ಕೈಗಾರಿಕೆಗಳಿಂದ ಜಲ ಮಾಲಿನ್ಯ ಉಂಟಾಗುತ್ತಿದ್ದು ಮುಂದಿನ ದಿನಗಳಲ್ಲಿ ಯುವಜನಾಂಗದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು ಜನ ಜಾಗೃತಿ ಅಗತ್ಯ ಎಂದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ದಯಾ ಸಾಗರ್ ಪೂಂಜ, ಎಕ್ಕಾರು ಸದಾಶಿವ ಶೆಟ್ಟಿ, ಪಡುಪಣಂಬೂರು ಗ್ರಾಪಂ ಪಿಡಿಒ ರಮೇಶ್ ನಾಯ್ಕ, ಸದಸ್ಯೆ ಪುಷ್ಪ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
13/03/2022 11:47 am