ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಅಂಗಾಂಗ ದಾನ ಮೂಲಕ ಆರು ಜನರಿಗೆ ಜೀವದಾನ ನೀಡಿದ ಇಂದ್ರಮ್ಮ!

ಮಣಿಪಾಲ: ದಾವಣಗೆರೆಯಲ್ಲಿ ರಸ್ತೆ ಅಪಘಾತಗೊಂಡು ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಇಂದ್ರಮ್ಮ

ಮೆದುಳು ನಿಷ್ಕ್ರಿಯಗೊಂಡ ಬಳಿಕ ತಮ್ಮ ಅಂಗಾಂಗ ದಾನ ಮಾಡಿದ್ದಾರೆ.ಈ ಮೂಲಕ ನಾಲ್ವರಿಗೆ ಜೀವದಾನ ಮಾಡಿ ಸಾವಿನಲ್ಲೂ ಮಾದರಿ ಎನಿಸಿದ್ದಾರೆ. ಇಂದ್ರಮ್ಮ ಕುಟುಂಬ ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದ ಬಳಿಕ ಅವರ ದೇಹದ ಹೃದಯ ಕವಾಟಗಳು, ಯಕೃತ್ ಎರಡು ಮೂತ್ರಪಿಂಡ, ಎರಡು ಕಾರ್ನಿಯಾಗಳನ್ನು ದಾನ ಮಾಡಲಾಯಿತು.

ಆರು ರೋಗಿಗಳಿಗೆ ವಿವಿಧ ಅಂಗಾಂಗಗಳ ರವಾನೆ ಮಾಡುವ ಪ್ರಕ್ರಿಯೆ ಇಂದು‌ ನಡೆಯಿತು. ಕೆಎಂಸಿ, ಯನಪೋಯ ಮತ್ತು ಚೆನ್ನೈ ನ ಎಂಜಿಎಂ ಆಸ್ಪತ್ರೆಗೆ ಪೊಲೀಸ್ ಬೆಂಗಾವಲಿನ ಮೂಲಕ ಅಂಗಾಂಗ ರವಾನೆ ಮಾಡಲಾಯಿತು.

Edited By : Nagesh Gaonkar
PublicNext

PublicNext

25/01/2022 06:38 pm

Cinque Terre

55.73 K

Cinque Terre

0

ಸಂಬಂಧಿತ ಸುದ್ದಿ