ಮುಲ್ಕಿ: ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘ (ರಿ), ರೋಟರಿ ಕ್ಲಬ್ ,ಮತ್ತು ಯುವವಾಹಿನಿ (ರಿ) ಮುಲ್ಕಿ ಆಶ್ರಯದಲ್ಲಿ 21 ದಿನಗಳ ಯೋಗ ಮತ್ತು ಪ್ರಾಣಾಯಾಮ ಶಿಬಿರ 'ಯೋಗ ದರ್ಪಣ' ಆರಂಭಗೊಂಡಿತು. ಯೋಗ ಶಿಬಿರವನ್ನು ಯೋಗ ಗುರು ಪ್ರಥ್ವಿನ್ ಉದ್ಘಾಟಿಸಿದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರ್ ಕಲ್, ಮಾತನಾಡಿ ಯೋಗದಿಂದ ಉತ್ತಮ ಆರೋಗ್ಯದ ಜೊತೆಗೆ ಉಲ್ಲಾಸದಾಯಕ ವಾತಾವರಣ ನಿರ್ಮಾಣ ಸಾಧ್ಯ ಎಂದರು.
ಸಮಿತಿ ಸದಸ್ಯ ಹರೀಂದ್ರ ಸುವರ್ಣ, ಕಾರ್ಯದರ್ಶಿ ಕಮಲಾಕ್ಷ ಬಡಗುಹಿತ್ಲು, ಖಜಾಂಚಿ ಪ್ರಕಾಶ್ , ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ ಜಿ. ಅಮೀನ್, ಯುವವಾಹಿನಿ ಅಧ್ಯಕ್ಷ ಭರತೇಶ ಅಮೀನ್, ಕಾರ್ಯದರ್ಶಿ ಚರಿಷ್ಮಾ ಉಪಸ್ಥಿತರಿದ್ದರು.
ಶಿಬಿರವನ್ನು ಯೋಗಾಚಾರ್ಯ ವಿನೋದ್ ಕುಮಾರ್ ನಡೆಸಿಕೊಡುತ್ತಿದ್ದಾರೆ.
ಶಿಬಿರ ಪ್ರತಿದಿನ ಬೆಳಗ್ಗೆ 6ರಿಂದ 7 ಗಂಟೆವರೆಗೆ ನಡೆಯಲಿದೆ.
Kshetra Samachara
03/01/2022 03:14 pm