ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹೊಸ ವರ್ಷದಂದು ಬಾಳಿಗಾ ಆಸ್ಪತ್ರೆಯಲ್ಲಿ 29 ನೇ ಮದ್ಯವ್ಯಸನ ವಿಮುಕ್ತಿ ಶಿಬಿರ

ಉಡುಪಿ: ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ಪಿ.ವಿ.ಭಂಡಾರಿಯವರ ನೇತೃತ್ವದಲ್ಲಿ ಜನವರಿ 01.01.2022 ರಿಂದ 10.01.2022 ರವರೆಗೆ 29 ನೇ ಮದ್ಯವ್ಯಸನ ವಿಮುಕ್ತಿ ಶಿಬಿರವು, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಜರುಗಲಿದೆ ಎಂದು ಡಾ.ವಿರೂಪಾಕ್ಷ ದೇವರಮನೆ ಹೇಳಿದರು.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾಹಿತಿ ನೀಡಿದ ಅವರು ,ಶಿಬಿರಕ್ಕೆ ದಾಖಲಾಗುವ ಶಿಬಿರಾರ್ಥಿಗಳಿದ 500/-ರೂ ಶುಲ್ಕವನ್ನು ಪಡೆಯುತ್ತಿದ್ದು ಶಿಬಿರಾರ್ಥಿಗಳಿಗೆ ತಗಲುವ ಊಟ, ವಸತಿ, ಚಿಕಿತ್ಸೆಯ ವೆಚ್ಚವನ್ನು ಕಮಲ್ ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್ ಭರಿಸುತ್ತಿದೆ.

ಶಿಬಿರಾರ್ಥಿಗಳಲ್ಲಿ ಕಂಡುಬರುವ ದೈಹಿಕ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾದ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿದಿನ ಶಿಬಿರಾರ್ಥಿಗಳಿಗೆ ಮದ್ಯ ಹಾಗೂ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳು ಮತ್ತು ಜೀವನ ಶೈಲಿ ಬದಲಾವಣೆ ಕುರಿತು ನುರಿತ ತಜ್ಞರಿಂದ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲದ ಸಮಯದಲ್ಲಿ ವಿವಿಧ ಕಾಲೇಜುಗಳಿಂದ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ.

ಚಿಕಿತ್ಸೆಯಲ್ಲಿ ಎ.ಎ.ಯ ಮಹತ್ವವನ್ನು ಪರಿಗಣಿಸಿ ಪ್ರತಿದಿನ ಎ.ಎ. ಸದಸ್ಯರಿಂದ ಒಂದು ಗಂಟೆಯ ಚರ್ಚೆ ಮತ್ತು ಮದ್ಯ ವಿಮುಕ್ತ ಜೀವನ ನಡೆಸುವ ಬಗ್ಗೆ ಮಾಹಿತಿ ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲ್ಲಿದ್ದಾರೆ.

ರಾತ್ರಿ 7 ರ ನಂತರ ಮದ್ಯವ್ಯಸನದಿಂದ ವ್ಯಕ್ತಿ ಧಾರ್ಮಿಕ ಜೀವನದಿಂದ ದೂರವಿದ್ದು ಅತನಲ್ಲಿ ಧಾರ್ಮಿಕತೆಯನ್ನು ಮತ್ತು ಶ್ರದ್ಧೆಯನ್ನು ಬೆಳೆಸುವ ಸಲುವಾಗಿ ಪ್ರತಿ ದಿನ ಭಜನೆ ಮತ್ತು ಧಾರ್ಮಿಕ ವಿಚಾರಗಳನ್ನು ಕುರಿತು ಮಾಹಿತಿಯನ್ನು ಆಯೋಜಿಸಲಾಗಿದೆ. ಶಿಬಿರದಿಂದ ತೆರಳಿದ ನಂತರವೂ ಶಿಬಿರಾರ್ಥಿಗಳ ಪ್ರಗತಿಯನ್ನು ನಮ್ಮ ಸಮುದಾಯ ಕಾರ್ಯಕರ್ತರು ಮನೆ ಭೇಟಿ, ದೂರವಾಣಿ ಕರೆ ಮತ್ತು ಪತ್ರಗಳನ್ನು ಬರೆಯುವ ಮೂಲಕ ಅವರ ಮದ್ಯಮುಕ್ತ ಜೀವನವನ್ನು ನಿರಂತರವಾಗಿ ಪರಿಶೀಲಿಸುತ್ತಾರೆ.

ಇದರೊಂದಿಗೆ ಒಂದು ವರ್ಷದ ಅವಧಿಯವರೆಗೆ ಮರುಭೇಟಿ ದಿನಾಂಕವನ್ನು ನಿರ್ಧರಿಸಿ ಪ್ರತಿ ತಿಂಗಳು ಶಿಬಿರಾರ್ಥಿಗಳನ್ನು ಪರೀಕ್ಷಿಸಲಾಗುವುದು. ಕೋವಿಡ್ ೧೯ರ ಸರ್ಕಾರದ ನಿಯಮಗಳಿಗೆ ಬದ್ದವಾಗಿ ಶಿಬಿರವನ್ನು ಆಯೋಜಿಸುತ್ತಿದ್ದು, ೩೦ ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಶಿಬಿರದ ಉದ್ಘಾಟನೆಯು ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ದಿನಾಂಕ 10.01.2022 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಡಾ. ಕಿರಣ್ ಕುಮಾರ್ ತಜ್ಞ ಮನೋವೈದ್ಯರು ಮತ್ತು ಅಧ್ಯಕ್ಷರು, ಭಾರತೀಯ ಮನೋವೈದ್ಯಕೀಯ ಸಂಘ -ಕರ್ನಾಟಕ ಶಾಖೆ ಇವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಾ. ದೀಪಕ್ ಮಲ್ಯ , ಡಾ. ಮಾನಸ ಮನೋರೋಗ ತಜ್ಞರು, ನಾಗರಾಜ್ ಮೂರ್ತಿ , ಮನಶಾಸ್ತ್ರಜ್ಞರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/12/2021 01:08 pm

Cinque Terre

7.96 K

Cinque Terre

0

ಸಂಬಂಧಿತ ಸುದ್ದಿ