ಉಡುಪಿ: ಉಡುಪಿಯ ಪ್ರಸಾದ್ ನೇತ್ರಾಲಯದ ಆರ್ಥೋಪ್ಟಿಕ್ಸ್ ಕ್ಲಿನಿಕ್, ಲೋ ವಿಷನ್ ಏಡ್ಸ್ ಕ್ಲಿನಿಕ್ ಐ - ಟ್ರೇಸ್ ಅಂಡ್ ಪೀಡಿಯಾಟ್ರಿಕ್ ಕ್ಲಿನಿಕ್ ನ್ನು ವಡ್ ನಗರದ ಸರ್ವೋದಯ ಸೇವಾ ಟ್ರಸ್ಟ್ ಇದರ ಚೇರ್ಮನ್ ಮತ್ತು ಪ್ರಧಾನಿ ಮೋದಿಯವರ ಹಿರಿಯ ಸಹೋದರ ಸೋಮ್ ಭಾಯ್ ಮೋದಿ ಉದ್ಘಾಟಿಸಿದರು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚಿಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕಲ್ಲಡ್ಕ ಪ್ರಭಾಕರ ಭಟ್, ಜ್ಯೋತಿಷಿ ಕಬಿಯಾಡಿ ಜಯರಾಮ್ ಆಚಾರ್ಯ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್, ಮಾಹೆ ಮಣಿಪಾಲದ ಸಹಕುಲಾಧಿಪತಿಗಳಾದ ಹೆಚ್.ಎಸ್ ಬಲ್ಲಾಳ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಕುಂದರ್, ಉದ್ಯಮಿಗಳಾದ ಪುರುಶೋತ್ತಮ್ ಶೆಟ್ಟಿ ಹಾಗೂ ವೈದ್ಯಕೀಯ ನಿರ್ದೇಶಕರಾದ ಕೃಷ್ಣ ಪ್ರಸಾದ್, ಡಿ.ಸಿ.ಎಫ್ ನಿರ್ದೇಶಕರಾದ ರಘುರಾಮ್ ರಾವ್ ಕೆ ಮತ್ತು ಪ್ರಮುಖರು ಉಪಸ್ಥಿತರಿದ್ದರು.
Kshetra Samachara
22/11/2021 11:11 am