ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರೀಯ ಪ್ರಕೃತಿ ದಿನಾಚರಣೆ

ಮಂಗಳೂರು: ರಾಷ್ಟ್ರೀಯ ಪ್ರಕೃತಿ ದಿನಾಚರಣೆ 2021ರ ಅಂಗವಾಗಿ ಮಂಗಳೂರು ನಗರದ ವೆನ್ಲಾಕ್ ಆಯುಷ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಸರಕಾರಿ ಲೇಡಿಗೋಷನ್ ಆಸ್ಪತ್ರೆ ವೈದ್ಯಕೀಯ ಅಧ್ಯಕ್ಷರಾದ ಡಾ. ದುರ್ಗಾ ಪ್ರಸಾದ್ ಉದ್ಘಾಟಿಸಿ, ಪ್ರಕೃತಿ ಚಿಕಿತ್ಸೆಯ ವಿಶೇಷ ಸೇವಾ ವಿಭಾಗವನ್ನು ಅನಾವರಣಗೊಳಿಸಿದರು. ನ್ಯಾಚುರೋಪತಿ ತಜ್ಞ ವೈದ್ಯ ಡಾ.ವಿವೇಕ್ ಅವರು ಪ್ರಾತ್ಯಕ್ಷಿಕೆಯ ಮೂಲಕ ಜಲಚಿಕಿತ್ಸೆ, ಸೂಜಿ ಚಿಕಿತ್ಸೆ, ಅಕ್ಯುಪಂಕ್ಚರ್ ಮತ್ತು ಪಥ್ಯಾಹಾರ ಸೇವನೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.

ಡಾ. ಸಹನಾ ಪಾಂಡುರಂಗ ಬಸವರಾಜ್, ಡಾ ಮಣಿಕರ್ಣಿಕ, ಡಾ. ನೂರುಲ್ಲಾ. ಡಾ. ಶಾಹಿದ್, ಸುನಂದಾ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶೋಭಾರಾಣಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/11/2021 07:59 am

Cinque Terre

2.92 K

Cinque Terre

0