ಉಡುಪಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ Pneumococcal Conjugate Vaccine ನನ್ನು ಪ್ರಾರಂಭಿಸಲಾಗುತ್ತಿದೆ. ಇಂದು ಉಡುಪಿಯ ಬಿ.ಆರ್. ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳಿಗೆ ಲಸಿಕೆ ನೀಡುವುದರೊಂದಿಗೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಐದು ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ನ್ಯುಮೊಕಾಕಸ್ ಕಾಯಿಲೆಗೆ ಈ ಲಸಿಕೆ ನೀಡಲಾಗುತ್ತದೆ. (ಸೈಪ್ರೊಕೊಕಸ್ ನ್ಯುಮೋನಿಯಾ) ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಉಂಟಾಗುತ್ತದೆ.
ಮಕ್ಕಳು ಹುಟ್ಟಿದ ಮೊದಲ ವರ್ಷದಲ್ಲಿ ಗಂಭೀರ ನ್ಯುಮೊಕಾಕಸ್ ಕಾಯಿಲೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನ್ಯುಮೊಕಾಕಸ್ ಬ್ಯಾಕ್ಟೀರಿಯಾದಿಂದ ತೀವ್ರತರ ಕಾಯಿಲೆಗಳಾದ ಮೆನಿಂಜೈಟೀಸ್, ಸೆಫ್ಟಿಸೀಮಿಯಾ, ನ್ಯುಮೋನಿಯಾ, ಕಿವಿ ಸೋರುವುದು ಉಂಟಾಗುತ್ತದೆ. ಮಕ್ಕಳ ಸಾವು ಸಂಭವಿಸುವ ಸಾಧ್ಯತೆಯೂ ಇದೆ.
ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲೂ ಇದನ್ನು ಪ್ರಾರಂಭಿಸಲಾಗಿದ್ದು, ಈ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 1540 ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಲಾಗಿದೆ ಎಂದು ಡಿಎಚ್ ಒ 'ಪಬ್ಲಿಕ್ ನೆಕ್ಸ್ಟ್' ಗೆ ಮಾಹಿತಿ ನೀಡಿದರು.
Kshetra Samachara
04/11/2021 03:04 pm