ಕೋಟ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ದುಶ್ಚಟ ಮುಕ್ತ ಸಮಾಜಕ್ಕಾಗಿ ಸಮಾವೇಶ
ಮಣೂರು ರಾಜಲಕ್ಷ್ಮಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕರು,ಕುಂದಾಪುರ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇವತ್ತು ಗಾಂಧೀಜಿಯವರ ತತ್ವಗಳನ್ನು ಪಾಲಿಸುವವರಲ್ಲಿ ಹಾಗೂ ಬಡಜನತೆಗೆ ಸೇವೆಗಳನ್ನು ಮಾಡುವವರಲ್ಲಿ ಮುಂಚೂಣಿಯಲ್ಲಿ ದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ 18 ಸಾವಿರ ಕುಟುಂಬಗಳನ್ನು ಗುರುತಿಸಿ ಅವರಿಗೆ ಬೇಕಾದಂತಹ ಎಲ್ಲ ಸಾಲ ಸೌಲಭ್ಯಗಳನ್ನು ಹಾಗೂ ಸಹಕಾರವನ್ನು ನೀಡಿ ಬಡವರನ್ನು ಮೇಲಕ್ಕೆತ್ತುವಂತಹ ಕಾರ್ಯ ಮಾಡಿದವರು ಡಾ. ವೀರೇಂದ್ರ ಹೆಗಡೆಯವರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಅಚ್ಚುತ ಪೂಜಾರಿ ವಹಿಸಿದ್ದರು.
ಉಡುಪಿ ಖ್ಯಾತ ಮನೋರೋಗ ತಜ್ಞರಾದ ಡಾ. ಪಿ.ವಿ. ಭಂಡಾರಿ ಅವರಿಂದ ಉಪನ್ಯಾಸ ನಡೆಯಿತು.ಈ ಸಂದರ್ಭದಲ್ಲಿ ಮದ್ಯಪಾನದಿಂದ ಮುಕ್ತಾರಾದ ತೇಜಾ ನಾಯ್ಕ ಯಾಡ್ತಡಿ ಹಾಗೂ ಮದುಕರ ಶೆಟ್ಟಿ ನೀಲಾವರ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
Kshetra Samachara
04/10/2021 12:26 pm