ಮುಲ್ಕಿ: ನಿಯಮಿತಯೋಗಾಭ್ಯಾಸವು ಆರೋಗ್ಯ ರಕ್ಷಣೆಯೊಂದಿಗೆ ಲವಲವಿಕೆಯ ಜೀವನ ನೀಡಬಲ್ಲದು ಎಂದು ಹಿರಿಯ ಯೋಗ ತರಬೇತುದಾರ ಜಯಕುಮಾರ್ ಕುಬೆವೂರು ಹೇಳಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ 15 ದಿನಗಳ ಕಾಲ ಪಡುಬಿದ್ರಿಯ ಪ್ರಾಣಾ ಹೀಲಿಂಗ್ ಸೆಂಟರ್ ಸಂಸ್ಥೆಯ ಸದಸ್ಯರಿಂದ ನಡೆಯುವ ಯೋಗದರ್ಪಣ ಯೋಗಾಸನ ಪ್ರಾಣಾಯಾಮ ಶಿಭಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಣಾ ಹೀಲಿಂಗ್ ಸೆಂಟರ್ ಸಂಸ್ಥೆಯ ಪ್ರತ್ವಿನ್ ಗೋಪೀನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕೊಕ್ಕರಕಲ್, ಉಪಾಧ್ಯಕ್ಷ ಸತೀಶ್ ಅಂಚನ್, ಮಹಿಳಾ ಮಂಡಲದ ಅಧ್ಯಕ್ಷೆ ಅಂಬಾವತಿ,ಯೋಗ ತರಬೇತುದಾರ ವಿನೋದ್ ಕುಮಾರ್ ಬಜ್ಪೆ,ಸೇವಾದಳದ ದಳಪತಿ ಸತೀಶ್ ಕಿಲ್ಪಾಡಿ ಮತ್ತಿತರರಿದ್ದರು.
ವಿನೋದ್ ಕುಮಾರ್ ರವರಿಂದ ಸೂಕ್ಷ್ಮ ವ್ಯಾಯಾಮ, ಪ್ರಾಣಾಯಾಮ ,ಲಘು ಯೋಗಾಬ್ಯಾಸ ನಡೆಯಿತು.ಮಹಿಳೆಯರು ಸೇರಿದಂತೆ ಬಹಳಷ್ಟು ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.
Kshetra Samachara
01/10/2021 05:10 pm