ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ "ಮಣಿಪಾಲ ಹೆಲ್ತ್ ಕಾರ್ಡ್"

ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್‌ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಯಶಸ್ವಿಯಾಗಿದೆ

ಸಂಸ್ಥೆಯ ಸಂಸ್ಥಾಪಕ ದಿ| ಡಾ| ಟಿಎಂಎ ಪೈಯವರ ಕನಸನ್ನು ಈಡೇರಿಸಲು ಆರೋಗ್ಯ ಸೇವೆ ಎಲ್ಲರಿಗೂ ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಲು ಮಣಿಪಾಲ ಆರೋಗ್ಯ ಕಾರ್ಡ್‌ ಪ್ರಾರಂಭಿಸಲಾಯಿತು. ಕಳೆದ 21 ವರ್ಷಗಳಿಂದ ಉತ್ತಮ ಸೇವೆ ಜತೆಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವುದರೊಂದಿಗೆ ಯೋಜನೆಗೆ ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಈ ಕಾರ್ಡ್‌ಗಳನ್ನು ಸುಲಭವಾಗಿ ನೋಂದಾಯಿಸಲು ಹಾಗೂ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್‌ ಕಾರ್ಡನ್ನು ಪರಿಚಯಿಸಲಾಗಿದೆ. ಇದನ್ನು ಫ‌ಲಾನುಭವಿಗಳಿಗೆ ಸ್ಥಳದಲ್ಲೇ ನೀಡಲಾಗುತ್ತದೆ.

ಮಣಿಪಾಲ ಆರೋಗ್ಯ ಕಾರ್ಡ್‌ ಹೊಂದಿರುವವರಿಗೆ ಎಲ್ಲ ತಜ್ಞ ಅಥವಾ ಸೂಪರ್‌ ಸ್ಪೆಷಲಿಸ್ಟ್‌ ವೈದ್ಯರ ಹೊರರೋಗಿ ಸಮಾಲೋಚನೆ ಮೇಲೆ ಶೇ. 50, ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ. 30, ರೇಡಿಯೋಲಜಿ ಪರೀಕ್ಷೆಗಳ ಮೇಲೆ ಶೇ 20, ಡಯಾಲಿಸಿಸ್‌ನಲ್ಲಿ 100 ರೂ., ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಗಳ ಮೇಲೆ ಶೇ. 12, ಒಳ ರೋಗಿ ಬಿಲ್‌ನಲ್ಲಿ ಶೇ. 25ರಷ್ಟು ರಿಯಾಯಿತಿ ಸಿಗಲಿದೆ.

ಕಾರ್ಡ್‌ ಹೊಂದಿರುವವರು ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಗೋವಾ ಮತ್ತು ಕಟೀಲಿನಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ದಂತ ಸೇವೆಗಳ ಪ್ರಯೋಜನ ಪಡೆಯಬಹುದು.ಕಾರ್ಡ್‌ ಶುಲ್ಕದ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ 9980 854700 ಸಂಖ್ಯೆಗೆ ಕರೆ ಮಾಡಬಹುದು.

Edited By : Shivu K
Kshetra Samachara

Kshetra Samachara

20/09/2021 05:34 pm

Cinque Terre

14.45 K

Cinque Terre

0

ಸಂಬಂಧಿತ ಸುದ್ದಿ