ಉಡುಪಿ: ಮಕ್ಕಳ ಜೊತೆ ಸಂವಾದ ನಡೆಸುವ ಮೂಲಕ ನೂತನ ಡಿ.ಸಿ ಕೂರ್ಮ ರಾವ್ ಎಂ ಇವತ್ತು ಅಧಿಕಾರ ಸ್ವೀಕಾರ ಮಾಡಿದರು.
ಉಡುಪಿಯ ಸರಕಾರಿ ಬಾಲಕಿಯರ ಶಾಲೆಗೆ ಭೇಟಿ ನೀಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಕೆಲಕಾಲ ಬೆರೆತರು.ಜಿಲ್ಲೆಯಲ್ಲಿ ಇಂದಿನಿಂದಲೇ ಶಾಲಾರಂಭಗೊಂಡಿತ್ತು.
ಮೊದಲ ದಿನ ಶಾಲೆಗೆ ತೆರಳಿ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದ ಡಿ.ಸಿ,ಮಕ್ಕಳ ಶಾಲೆಯ ಅನುಭವ ,ಪಾಠಗಳ ಬಗ್ಗೆ ಸಂವಾದ ನಡೆಸಿದರು.ಕೊರೋನಾ ನಿರ್ಮೂಲನೆಗೆ ನಿಮ್ಮ ಸಹಕಾರ ಅಗತ್ಯ ಎಂದು ಕಿವಿಮಾತು ಹೇಳಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಡಿ.ಸಿ ಜೊತೆ ಹಂಚಿಕೊಂಡರು.ಮುಂದೆ ಜಿಲ್ಲೆಯಲ್ಲಿ ಇದೇ ರೀತಿ ಪ್ರವಾಸ ಮಾಡಿ ಜಿಲ್ಲೆಯ ನಾಡಿಮಿಡಿತ ಅರಿತುಕೊಳ್ಳುವುದಾಗಿ ಜಿಲ್ಲಾಧಿಕಾರಿ ಹೇಳಿದರು.
Kshetra Samachara
01/09/2021 02:03 pm