ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮ್ಯಾನೇಜ್ ಮೆಂಟ್ ಮತ್ತು ಸಿಬ್ಬಂದಿ ತಿಕ್ಕಾಟ: ಇಂದು ಕೂಡ ಆಸ್ಪತ್ರೆ ಮುಂದೆ ಮುಷ್ಕರ

ಉಡುಪಿ: ನಿನ್ನೆ 16 ಜನರನ್ನು ಕೆಲಸದಿಂದ ವಜಾ ಮಾಡಿದ್ದಕ್ಕೆ ಉಡುಪಿಯ ಬಿಆರ್ ಎಸ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎಲ್ಲ ಸಿಬ್ಬಂದಿ ರೊಚ್ಚಿಗೆದ್ದಿದ್ದಾರೆ.ನಿನ್ನೆ ತಡರಾತ್ರಿ ತನಕ ಮುಷ್ಕರ ಹೂಡಿ ಮುತ್ತಿಗೆ ಹಾಕಿದ್ದ ಆಸ್ಪತ್ರೆ ಸಿಬ್ಬಂದಿ ಇವತ್ತು ಮುಷ್ಕರ ಮುಂದುವರೆಸಿದ್ದಾರೆ.ವೇತನ ಪಾವತಿಸದೇ ಇದ್ದ ಕಾರಣ ಇಲ್ಲಿಯ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹದಿನಾರು ಜನರಿಗೆ ನಿನ್ನೆ ಏಕಾಏಕಿ ಗೇಟ್ ಪಾಸ್ ನೀಡಲಾಗಿತ್ತು.ಬಿ.ಅರ್ ಶೆಟ್ಟಿ ಮ್ಯಾನೇಜ್ ಮೆಂಟ್ ನ‌ ಈ ನಿರ್ಧಾರಕ್ಕೆ ಇಡೀ ಆಸ್ಪತ್ರೆ ಸಿಬ್ಬಂದಿಯೇ ತಿರುಗಿ ಬಿದ್ದಿದ್ದಾರೆ.ಇವತ್ತು ಎಮರ್ಜೆನ್ಸಿ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳುಸ್ಥಗಿತಗೊಂಡಿವೆ.ಹದಿನಾರು ಜನ ಮಾತ್ರ ಅಲ್ಲ, ನಮ್ಮೆಲ್ಲರನ್ನೂ ಕೆಲಸದಿಂದ ವಜಾ ಮಾಡಿ ಎಂದು ಆಸ್ಪತ್ರೆ ನೌಕರರು ಆಸ್ಪತ್ರೆ ಮುಂದೆ ಮುಷ್ಕರ ಹೂಡಿದ್ದಾರೆ.

Edited By : Shivu K
Kshetra Samachara

Kshetra Samachara

25/08/2021 12:12 pm

Cinque Terre

15.36 K

Cinque Terre

0

ಸಂಬಂಧಿತ ಸುದ್ದಿ