ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:"ಕೊರೊನಾ ಸಂಕಷ್ಟದಲ್ಲಿ ಉದ್ಯಮಕ್ಕೆ ಹೊಡೆತ ಬಿದ್ದಿದ್ದು ಸಂಘಟಿತರಾಗಿ ಕ್ರಿಯಾಶೀಲರಾಗೋಣ":

ಮುಲ್ಕಿ:ಶಾಮಿಯಾನ ಸಂಯೋಜಕರ ಒಕ್ಕೂಟ (ಕಿನ್ನಿಗೋಳಿ, ಮುಲ್ಕಿ, ಹಳೆಯಂಗಡಿ,ಬಳ್ಕುಂಜೆ, )ದ 13 ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಹಾಸಭೆ ಎಸ್.ಕೋಡಿಯ ಆದಿಶಕ್ತಿ ಮಹಾಮ್ಮಾಯಿ ಸಭಾಭವನದಲ್ಲಿ ನಡೆಯಿತು.

ಸಭೆಯನ್ನು ದಾಮೋದರ ಅಮೀನ್ ಸಂತೆಕಟ್ಟೆ, ಹಳೆಯಂಗಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ "ಕೊರೊನಾ ಸಂಕಷ್ಟದಲ್ಲಿ ಉದ್ಯಮಕ್ಕೆ ಹೊಡೆತ ಬಿದ್ದಿದ್ದು ಸಂಘಟಿತರಾಗಿ ಕ್ರಿಯಾಶೀಲರಾಗೋಣ" ಎಂದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಅಮೀನ್, ಉಪಾಧ್ಯಕ್ಷರಾಗಿ ನಂದೀಶ್ ಎಮ್ ಕೋಟ್ಯಾನ್ ಕಮ್ಮಜೆ, ಕಾರ್ಯದರ್ಶಿಯಾಗಿ ಜಗನ್ನಾಥ ನಾಯಕ್,ಏಳಿಂಜೆ, ಕೋಶಾಧಿಕಾರಿಯಾಗಿ ಸದಾಶಿವ ಪುನರೂರು ,ಆಯ್ಕೆಯಾದರು,ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಜಗನ್ನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಸುವರ್ಣ ಐಕಳ ಸ್ವಾಗತಿಸಿ, ವಿಶ್ವನಾಥ ಶೆಣೈ ಧನ್ಯವಾದ ಅರ್ಪಿಸಿದರು.

Edited By : PublicNext Desk
Kshetra Samachara

Kshetra Samachara

24/08/2021 06:10 pm

Cinque Terre

7.88 K

Cinque Terre

0

ಸಂಬಂಧಿತ ಸುದ್ದಿ