ಬಂಟ್ವಾಳ: ಹಿಂದೂ ಯುವ ಸೇನೆ ಓಂ ಶಕ್ತಿ ಶಾಖೆ ಮೈಂದಾಳ-ನಾವೂರು, ದತ್ತಗುರು ಶಾಖೆ ಕನಪಾದೆ ಹಾಗೂ ಗಣೇಶ್ ಶಾಖೆ ಗಣೇಶ್ಕಟ್ಟೆ -ನಾವೂರು ಅಶ್ರಯದಲ್ಲಿ ದೇರಳಕಟ್ಟೆ ಯೆನಪೋಯ ಆಸ್ಪತ್ರೆಯ ಸಹಕಾರದೊಂದಿಗೆ ರಕ್ತದಾನ ಶಿಬಿರವು ನಾವೂರು ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಉದ್ಘಾಟಿಸಿದರು. ಹಿಂದೂ ಯುವ ಸೇನೆ ಕೇಂದ್ರಿಯ ಮಂಡಳಿಯ ಅಧ್ಯಕ್ಷ ಯಶೋಧರ ಚೌಟ ಎಕ್ಕೂರು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಿಂದೂ ಯುವ ಸೇನೆ ಕೇಂದ್ರಿಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಯು.ಎಸ್.ನಾವೂರು, ತಾಲೂಕು ಘಟಕದ ಅಧ್ಯಕ್ಷ ಪುಷ್ಪರಾಜ್ ಜಕ್ರಿಬೆಟ್ಟು, ಮಂಗಳೂರು ಕೆಎಂಸಿಯ ಬಯೋ ಮೆಡಿಕಲ್ ಎಂಜಿನಿಯರ್ ಬಾಲಸುಬ್ರಹ್ಮಣ್ಯ ಎಯ್ಕೆರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ವಲಯಾಧ್ಯಕ್ಷ ಕೆ.ವಸಂತ ಮೂಲ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಎಕ್ಕೂರು, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕೆಮ್ಮಟೆ, ರಕ್ತನಿಧಿ ಸಂಚಾಲಕ ನಿಶಾಂತ್ ಜಪ್ಪಿನಮೊಗರು ಉಪಸ್ಥಿತರಿದ್ದರು.
Kshetra Samachara
23/08/2021 09:26 am