ಉಡುಪಿ: ಉಡುಪಿಯ ಬಿಆರ್ ಎಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ಸಂಬಳ ಕೊಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಧರಣಿ ಕುಳಿತಿದ್ದಾರೆ.ಈ ಹಿನ್ನೆಲೆಯಲ್ಲಿ ಇವತ್ತು ಶಾಸಕ ರಘುಪತಿ ಭಟ್ ,ಡಿಸಿ, ಸರ್ಜನ್, ಡಿಎಚ್ ಒ ನೇತೃತ್ವದಲ್ಲಿ ಸಭೆ ನಡೆಯಿತು.
ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮಾತುಕತೆ ನಡೆದಿದ್ದು ಎರಡು ದಿನದಲ್ಲಿ ಸಿಬ್ಬಂದಿಗಳಿಗೆ ಸಂಬಳ ಜಮಾ ಮಾಡುವ ಭರವಸೆ ನೀಡಲಾಗಿದೆ.
ಆಸ್ಪತ್ರೆಯ ಸಿಬ್ಬಂದಿಗಳಿಗೆ ಉಡುಪಿ ಡಿಸಿ ಜಿ. ಜಗದೀಶ್ಭ ರವಸೆ ಕೊಟ್ಟ ಹಿನ್ನೆಲೆಯಲ್ಲಿ ಬಿಆರ್ ಎಸ್ ಆಸ್ಪತ್ರೆ ಸಿಬ್ಬಂದಿ
ಪ್ರತಿಭಟನೆ ಕೈಬಿಟ್ಟಿದ್ದಾರೆ. ಕಳೆದ ರಾತ್ರಿಯಿಂದ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ನಿರಂತರ ಪ್ರತಿಭಟನೆ ನಡೆಸಿತ್ತಿದ್ದರು.
ದುಬೈ ಉದ್ಯಮಿ ಬಿ. ಆರ್ ಶೆಟ್ಟಿ ಕಟ್ಟಿಸಿ ಕೊಟ್ಟಿದ್ದ ಉಚಿತ ಸರ್ಕಾರಿ ಆಸ್ಪತ್ರೆ ಇದಾಗಿದ್ದು, ಆರ್ಥಿಕ ನಷ್ಟಕ್ಕೊಳಗಾಗಿ ಸಿಬ್ಬಂದಿಗಳ ಸಂಬಳ ಬಾಕಿ ಇರಿಸಲಾಗಿತ್ತು.ಇದೀಗ ಸಭೆಯಲ್ಲಿ ವೇತನ ಪಾವತಿ ಭರವಸೆ ಹಿನ್ನೆಲೆಯಲ್ಲಿ ಧರಣಿ ಕೈಬಿಡಲಾಗಿದೆ.
Kshetra Samachara
20/08/2021 06:27 pm