ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

21 ರಂದು ಮಣಿಪಾಲದ ಕೆಎಂಸಿಯಲ್ಲಿ ರೋಟರಿ-ಮಾಹೆ ಸ್ಕಿನ್ ಬ್ಯಾಂಕ್ ಉದ್ಘಾಟನೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಮಣಿಪಾಲ್ ಟೌನ್ ವತಿಯಿಂದ ರೋಟರಿ ಜಾಗತಿಕ ಅನುದಾನದಿಂದ 21ನೇ ಆಗಸ್ಟ್ 2021ರಂದು "ರೋಟರಿ ಮಾಹೆ ಸ್ಕಿನ್ ಬ್ಯಾಂಕ್ (ಚರ್ಮದ ನಿಧಿ)" ಆರಂಭವಾಗಲಿದೆ. ಕೇಂದ್ರವನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ (ಎಂಇಎಂಜಿ) ಯ ಮುಖ್ಯಸ್ಥರಾದ ಡಾ. ರಂಜನ್ ಆರ್ ಪೈ ಉದ್ಘಾಟಿಸಲಿದ್ದಾರೆ. ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಹೆ ಮಣಿಪಾಲದ ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್, ರೋಟರಿ ಜಿಲ್ಲೆ RID 3182 ಯ ರಾಜ್ಯಪಾಲರಾದ Rtn. ಎಂ ಜಿ ರಾಮಚಂದ್ರ ಮೂರ್ತಿ, ಗೌರವ ಅತಿಥಿಗಳಾಗಿ ಕೆ ಎಂ ಸಿ ಡೀನ್ ಡಾ. ಶರತ್ ಕೆ ರಾವ್, ರೋಟರಿ ಸ್ಕಿನ್ ಬ್ಯಾಂಕ್ ನ ಅಂತರಾಷ್ಟ್ರೀಯ ಪ್ರಾಯೋಜಕರಾದ Rtn . ದಿನೇಶ್ ನಾಯಕ್ ಮತ್ತು Rtn . ಡಾ ವಸಂತ್ ಪ್ರಭು, ಡಿ ಆರ್ ಎಫ್ ಮುಖ್ಯಸ್ಥರಾದ Rtn . ಡಾ ಪಿ ನಾರಾಯಣ , ಮುಂಬಯಿಯ ರಾಷ್ಟ್ರೀಯ ಸುಟ್ಟ ಕೇಂದ್ರದ ನಿರ್ದೇಶಕರಾದ Rtn . ಡಾ ಸುನಿಲ್ ಎಂ ಕೇಶ್ವಾನಿ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ್ಣ ಭಾಗವಹಿಸಲಿದ್ದಾರೆ ಎಂದು ಮಾಹೆ ಮಣಿಪಾಲದ ಕುಲಸಚಿವಾರಾದ ಡಾ. ನಾರಾಯಣ ಸಭಾಹಿತ್, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಮತ್ತು ರೋಟರಿ ಕ್ಲಬ್ ಆಫ್ ಮಣಿಪಾಲ್ ಟೌನ್ ನ ಅಧ್ಯಕ್ಷರಾದ Rtn ಗಣೇಶ್ ನಾಯಕ್ ತಿಳಿಸಿದ್ದಾರೆ. "ರೋಟರಿ ಮಾಹೆ ಸ್ಕಿನ್ ಬ್ಯಾಂಕ್ (ಚರ್ಮದ ನಿಧಿ)" ಮಾಹೆ ಮಣಿಪಾಲ ಮತ್ತು ರೋಟರಿ ಕ್ಲಬ್ ಆಫ್ ಮಣಿಪಾಲ್ ಟೌನ್ ನ ಜಂಟಿ ಯೋಜನೆಯಾಗಿದ್ದು, ಮಣಿಪಾಲಕ್ಕೆ ಉಡುಪಿಯಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಸುಟ್ಟ ಗಾಯಗಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಈ ಕೇಂದ್ರದಿಂದ ಸಮುದಾಯಕ್ಕೆ ಬಹಳಷ್ಟು ಪ್ರಯೋಜನವಾಗಲಿದೆ.

Edited By : PublicNext Desk
Kshetra Samachara

Kshetra Samachara

18/08/2021 03:22 pm

Cinque Terre

5.68 K

Cinque Terre

0

ಸಂಬಂಧಿತ ಸುದ್ದಿ