ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಬಕ ಚಲೋ ಬೃಹತ್ ಮೆರವಣಿಗೆಯಲ್ಲಿ ಕೋವಿಡ್ ನಿಯಮ ಮಾಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಸ್ವಾತಂತ್ರ್ಯ ಉತ್ಸವದ ಹಿನ್ನೆಲೆ ಸರಕಾರಿ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಗ್ರಾಮ ಸ್ವರಾಜ್ಯ ರಥಯಾತ್ರೆ ಹೊರಟಿದ್ದ ವೇಳೆ ವೀರ ಸಾವರ್ಕರ್ ಭಾವಚಿತ್ರ ತೆರವು ಮಾಡಲು ಆಗ್ರಹಿಸಿ ಎಸ್‌ಡಿಪಿಐ ಕಾರ್ಯಕರ್ತರು ರಥಕ್ಕೆ ಅಡ್ಡಿಪಡಿಸಿದ್ದನ್ನು ಖಂಡಿಸಿ ಕಬಕ ಚಲೋ ನಡೆಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕ ತನಕ ವೀರ ಸಾವರ್ಕರ್ ಭಾವ ಚಿತ್ರ ಹೊತ್ತ ಜಾಗೃತಿ ರಥಯಾತ್ರೆ ಆರಂಭಗೊಂಡಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಥಕ್ಕೆ ಡಾ. ಎಂ ಕೆ ಪ್ರಸಾದ್ ಚಾಲನೆ ನೀಡಿದರು. ಪುತ್ತೂರಿನಿಂದ ಕಬಕದವರೆಗೆ ನಡೆದ ಮೆರವಣಿಗೆಯಲ್ಲಿ ಕಾರ್ಯಕರ್ತರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ ಘಟನೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಕೇಸ್ ಗಳು ಜಾಸ್ತಿ ಅಗ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಭೆ ,ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದಂತೆ ಮಾರ್ಗಸೂಚಿಯನ್ನು ಹೊರಡಿಸಿತ್ತು ಅದರೆ ಇಂದು ನಡೆದ ರ್ಯಾಲಿಯಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು ಅಲ್ಲದೆ ಸಾಮಾಜಿಕ ಅಂತರವಾಗಲಿ ,ಮಾಸ್ಕ್ ಧರಿಸದೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.ಈ ಜಾಗೃತಿ ರಥಯಾತ್ರೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಟಿ.ಜಿ ರಾಜರಾಮ ಭಟ್, ಮೈತ್ರಿಯ ಗುರುಕುಲದ ಸುಬ್ರಹ್ಮಣ್ಯ, ಅಜಿತ್ ಹೊಸಮನೆ, ಚಿನ್ನಯ್ ಈಶ್ವರಮಂಗಲ, ದಿನೇಶ್ ಪಂಜಿಗ, ಅಶೋಕ್ ತ್ಯಾಗರಾಜನಗರ, ಗಣರಾಜ ಭಟ್ ಕೆದಿಲ, ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವಹಿಂದುಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಕಾರ್ಯದರ್ಶಿ ಸತೀಶ್ ಭಟ್, ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

17/08/2021 10:17 pm

Cinque Terre

36.06 K

Cinque Terre

16

ಸಂಬಂಧಿತ ಸುದ್ದಿ