ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರದಲ್ಲಿ ಆಕ್ಸಿಜನ್ ಫ್ಲಾಂಟ್ ಲೋಕಾರ್ಪಣೆಗೆ ರೆಡಿ

ಕುಂದಾಪುರ : ಕೊರೊನಾ ಹಿನ್ನೆಲೆಯಲ್ಲಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಕಾರ್ಯ ಶ್ಲಾಘನೀಯ. ಸದ್ಯ ಮೂರನೇ ಅಲೆಯ ಸಂಭಾವ್ಯದ ಹಿನ್ನೆಲೆ ಸಂಪೂರ್ಣ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನಿವಾರಣೆಗೆ 60 ಲಕ್ಷ ಅಂದಾಜು ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ವೈದ್ಯಕೀಯ ಆಮ್ಲಜನಕ ಘಟಕ ಅಥವಾ ಮೆಡಿಕಲ್ ಆಕ್ಸಿಜನ್ ಫ್ಲಾಂಟ್ ನಿರ್ಮಿಸಲಾಗಿದೆ.

ವಾತಾವರಣದಲ್ಲಿರುವ ಗಾಳಿಯಲ್ಲಿ ಆಮ್ಲಜನಕ ಸಹಿತ ನೈಟ್ರೋಜನ್ ಹಾಗೂ ಇತರ ಅನಿಲಗಳಿರುತ್ತದೆ. ಆ ಗಾಳಿಯಿಂದ ಶುದ್ಧ ಆಮ್ಲಜನಕವನ್ನು ಬೇರ್ಪಡಿಸಿ ಶುದ್ಧ ಆಮ್ಲಜನಕವನ್ನು ಘಟಕಕ್ಕೆ ಸೇರಿಸುವ ಮೂಲಕ ಅದನ್ನು ವೈದ್ಯಕೀಯ ಉಪಯೋಗಕ್ಕೆ ಬಳಸಲಾಗುತ್ತದೆ.

ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡ ಘಟಕವನ್ನು ನಿರ್ಮಿಸಲು ಗೇಲ್ ಎನ್ನುವ ಸಂಸ್ಥೆಗೆ ಕಾಮಗಾರಿ ವಹಿಸಲಾಗಿದ್ದು ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ನೋಯ್ಡಾ ಮೂಲದ ಮಾಲೆಸ್ಸಿವ್ ಕಂಪೆನಿ ನೋಡಿಕೊಳ್ಳಲಿದೆ. ಗೇಲ್ ಸಂಸ್ಥೆ ದೇಶದಲ್ಲಿ ಒಟ್ಟು 12 ಕಡೆ ಈ ಆಕ್ಸಿಜನ್ ಫ್ಲಾಂಟ್ ನಿರ್ಮಾಣ ಜವಾಬ್ದಾರಿ ಪಡೆದಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಘಟಕ ನಿರ್ಮಿಸಿದೆ.

ಸಿದ್ದವಾದ ಆಕ್ಸಿಜನ್ ಫ್ಲಾಂಟ್ ಲೋಕಾರ್ಪಣೆಗೆ ತಯಾರಿದೆ.

Edited By : Nirmala Aralikatti
Kshetra Samachara

Kshetra Samachara

16/08/2021 07:50 pm

Cinque Terre

16.23 K

Cinque Terre

0

ಸಂಬಂಧಿತ ಸುದ್ದಿ