ಕಾಪು : ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಉಚ್ಚಿಲ,ಮೂಳೂರು ಮತ್ತು ಎರ್ಮಾಳ್ ಇವರ ವತಿಯಂದ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಉಚ್ಚಿಲ ಬ್ಲೂವೆವ್ಸ್ ಅಪಾರ್ಟಮೆಂಟ್ ಸಂಕಿರ್ಣದಲ್ಲಿ ಮಂಗಳವಾರ ನಡೆಯಿತು.
ಈ ರಕ್ತದಾನ ಶಿಬಿರದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಆಗಿರುವ ಡಾಕ್ಟರ್ ವೀಣಾಕುಮಾರಿ ಭಾಗವಹಿಸಿ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾಯಜ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಧ್ಯೆಯ್ಯ ಮತ್ತು ಉದ್ದೇಶವನ್ನು ವಿವರಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಶ್ಯಾಮಲ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸುಮಾರು 60 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ। ರಾಜಶ್ರೀ ಕಿಣಿ, ಉಚ್ಚಿಲದ ಹಿರಿಯ ವೈದ್ಯರಾದ ಡಾ। ಗಂಗಾಧರ್ ಸುವರ್ಣಾ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಉಚ್ಚಿಲ ಇದರ ಅಧ್ಯಕ್ಷರಾದ ಸಯ್ಯದ್ ನಷತ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಉಚ್ಚಿಲ ಇದರ ಪ್ರಧಾನ ಕಾರ್ಯದರ್ಶಿ ಸಿರಾಝ್ ಎನ್.ಎಚ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಮೂಳೂರು ಇದರ ಗೌರವಾಧ್ಯಕ್ಷ ಎಸ್.ಎಂ. ರಫೀಕ್ ಮೂಳೂರು, ಫಾರೂಕ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಉಚ್ಚಿಲ ಇದರ ಏರಿಯ ಅಧ್ಯಕ್ಷ ಇಬ್ರಾಹಿಂ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫಾರಂ ಜಿಲ್ಲಾ ಸಮಿತಿ ಸದಸ್ಯ ಆಸೀಫ್ ವೈ.ಸಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ನೂರ್ ನವಾಜ್ ನಿರೂಪಿಸಿ. ಕಲೀಲ್ ವಂದಿಸಿದರು.
Kshetra Samachara
10/08/2021 01:59 pm