ಮುಲ್ಕಿ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಹೆಣ್ಣುಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನೆ ಯೋಜನೆ ಕಿನ್ನಿಗೋಳಿ, ಮಹಿಳಾಮತ್ತುಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ "ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಕ್ಕಳು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು"ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರ ಮೂಲ್ಕಿ ಸಮೀಪದ ಲಿಂಗಪ್ಪಯ್ಯಕಾಡು ಸಮುದಾಯ ಭವನದಲ್ಲಿ ನಡೆಯಿತು
ಸಂಪನ್ಮೂಲ ವ್ಯಕ್ತಿಗಳಾಗಿ ಪತ್ರಕರ್ತರು ಹಾಗೂ ತರಬೇತುದಾರರಾದ ಸಂಶುದ್ದೀನ್ ಮಾತನಾಡಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಲವು ಆಯಾಮಗಳು, ಕೋವಿಡ್ 19 ಪರಿಸ್ಥಿತಿಯಲ್ಲಿ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಮತ್ತು ಕುಟುಂಬದ ಒಳಗಿದ್ದು ಪಡೆಯುತ್ತಿರುವ ಯಾತನೆಗಳನ್ನು ಕೆಲವೊಂದು ದೃಶ್ಯಗಳ ಮೂಲಕ ತಿಳಿಸಿದರು
ಮಾಹಿತಿ ಕಾರ್ಯಾಗಾರದ ಫಲಾನುಭವಿಗಳಾದ 30 ಮಂದಿ ಕಿಶೋರಿಯರು ಕಾರ್ಯಾಗಾರದ ಗುಂಪುಚಟುವಟಿಕೆ , ಚರ್ಚೆ ನಡೆಸಿ ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಸಮರ್ಥರಾಗುವಲ್ಲಿ ವಹಿಸಬೇಕಾದ ತಿಳುವಳಿಕೆ ಬಗ್ಗೆ ಜಾಗೃತಿಗಾಗಿ ವಿಷಯಗಳನ್ನು ಪ್ರಸ್ತುತಪಡಿಸಿದರು.
ಪ್ರಜ್ಞಾ ಸಲಹಾ ಕೇಂದ್ರದ ಯೋಜನಾ ಸಂಯೋಜಕರಾದ ವಿಲಿಯಂ ಸಾಮುವೆಲ್ ಕಾರ್ಯಾಗಾರದ ಉದ್ದೇಶವನ್ನು ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ದಿನೇಶ್, ಸಲಹಾ ಕೇಂದ್ರದ ಯೋಜನಾ ಮೌಲ್ಯಮಾಪಕಿ ರೇಷ್ಮಾ ಜೋಗಿ, ಅಂಗನವಾಡಿ ಕಾರ್ಯಕರ್ತೆಯರಾದ ಸುಶೀಲಾ, ಶಾಮಲಾ, ಲಕ್ಷ್ಮಿ ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ಉಪಸ್ಥಿತರಿದ್ದರು.
ಜೊಯ್ಲಿನ್ ಡಿ ಅಲ್ಮೇಡಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಲಯ ಸಂಯೋಜಕ ಅಶೋಕ್ ಧನ್ಯವಾದ ಅರ್ಪಿಸಿದರು.
Kshetra Samachara
28/07/2021 03:02 pm