ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಹಾಯಕ ಪೊಲೀಸ್ ಉಪನಿರೀಕ್ಷಕರಿಗೆ ಇಂದು ರಿಲೀಫ್

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಉಪನಿರೀಕ್ಷಕರಿಗೆ ಉರ್ವಸ್ಟೋರ್ ನಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪುನರ್ಮನನ ಕಾರ್ಯಾಗಾರ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ಇಂದು ನಡೆಯಿತು. ಈ ಮೂಲಕ ಇಂದು ಎಲ್ಲಾ ಸಹಾಯಕ ಪೊಲೀಸ್ ಉಪನಿರೀಕ್ಷಕರಿಗೆ ರಿಲೀಫ್ ನೀಡಿರುವ ಪೊಲೀಸ್ ಆಯುಕ್ತರು ಅವರು ಕುಟುಂಬ ಸಮೇತ ಪಿಲಿಕುಳ ನಿಸರ್ಗಧಾಮದ ಭೇಟಿಗೂ ಅವಕಾಶ ನೀಡಿದ್ದಾರೆ.

ಇತ್ತೀಚೆಗೆ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಜೊತೆಗೆ ಎಎಸ್ಐ ಗಳಿಗೂ ರಿಲೀಫ್ ನೀಡಿ ಸಿನಿಮಾ ವೀಕ್ಷಣೆ, ಪಿಲಿಕುಳ ನಿಸರ್ಗಧಾಮ ಭೇಟಿಗೆ ಅವಕಾಶ ನೀಡಿದ್ದರು‌.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ವರ್ಷಪೂರ್ತಿ ವಿವಿಧ ಕೆಲಸಗಳ ಒತ್ತಡದಲ್ಲಿರುವ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಒಂದು ದಿನ ರಿಲೀಫ್ ನೀಡಿದ್ದು, ಈ ಮೂಲಕ ಯಾವುದೇ ಕೆಲಸದ ಜಂಜಡವಿಲ್ಲದೆ ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

27/02/2021 06:29 pm

Cinque Terre

19.47 K

Cinque Terre

0