ಮಂಗಳೂರು: ದ.ಕ.ಜಿಲ್ಲೆಯಲ್ಲಿ ಈವರೆಗೆ 87 ಶೇಕಡಾ ಜನರು ಆಯುಷ್ಮಾನ್ ಭಾರತ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಗೆ ಆಯುಷ್ಮಾನ್ ಭಾರತ ಯೋಜನೆ ಮೂಲಕ 24,88,42,088 ಕೋಟಿ ರೂ. ಅನುದಾನ ವಿನಿಯೋಗವಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ ಹೇಳಿದರು.
ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.ಯಾವುದೇ ಯೋಜನೆ ಅನುಷ್ಠಾನ ಆಗುವ ಸಂದರ್ಭದಲ್ಲಿ ಒಂದಷ್ಟು ಲೋಪಗಳಾಗುವುದು ಸಹಜ. ಆರೋಗ್ಯ ಮಿತ್ರ ಕೆಲವೊಂದು ಸಿಬ್ಬಂದಿಗೆ ಕನ್ನಡವೂ ಬಾರದ ಕಾರಣ ಹಲವು ಫಲಾನುಭವಿಗಳಿಗೆ ಸರಿಯಾದ ಮಾಹಿತಿಗಳು ಲಭ್ಯವಾಗದೆ ತೊಂದರೆಯಾಗಿರಬಹುದು ಎಂದು ಹೇಳಿದರು.
ಫಲಾನುಭವಿಗಳು ಮೊದಲು ಜಿಲ್ಲಾಸ್ಪತ್ರೆಗೆ ತೆರಳಿ ಅಲ್ಲಿ ರೋಗಿಗೆ ಸರಿಯಾದ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ವೈದ್ಯಾಧಿಕಾರಿಗಳ ಶಿಫಾರಸು ಪತ್ರದ ಮೇರೆಗೆ ಆಯುಷ್ಮಾನ್ ಲಭ್ಯವಿರುವ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಆಯುಷ್ಮಾನ್ ಭಾರತ ಯೋಜನೆಯ ಪ್ರಯೋಜನ ಪಡೆಯಬಹುದು. ಆದರೆ ತುರ್ತುಸೇವೆಯ ಸಂದರ್ಭದಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಆದರೆ ಡಯಾಗ್ನಿಸಿಸ್ ಗೆ ಹಣ ಪಾವತಿ ಮಾಡಬೇಕಾಗುತ್ತದೆ. ಆ ಬಳಿಕ ಪ್ಯಾಕೇಜ್ ಗೆ ತಕ್ಕಂತೆ ಆಯುಷ್ಮಾನ್ ಭಾರತದಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಎಂದು ಆರೋಗ್ಯಾಧಿ ಮಾಹಿತಿ ನೀಡಿದರು.
Kshetra Samachara
19/01/2021 05:23 pm