ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊರೊನಾವನ್ನು ನಿಭಾಯಿಸಲು ಭಾರತ ಸಶಕ್ತ: ಡಾ. ಭರತ್ ಶೆಟ್ಟಿ ವೈ

ಮುಲ್ಕಿ: ಕೊರೊನಾ ಹೊಡೆತದಿಂದ ದೇಶ ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರೂ ಇದೀಗ ದೇಶದಲ್ಲಿ ವ್ಯಾಕ್ಸಿನ್ ಬಳಕೆ ಆರಂಭವಾಗಿರುವುದರಿಂದ 2ನೇ ಕೊರೊನಾ ಅಲೆಯನ್ನು ನಿಭಾಯಿಸಲು ದೇಶ ಸಶಕ್ತವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಅವರು ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ವಿರುದ್ದ ಆರಂಭವಾದ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಜನರ ಸೇವೆಗೈಯುವ ಕೊರೊನಾ ವಾರಿಯರ್ಸ್ ಗೆ ಪ್ರಥಮ ಆದ್ಯತೆ ನೀಡುವ ದೇಶದ ಪ್ರಧಾನಿಗಳು ಹಂತ ಹಂತವಾಗಿ ಸರ್ವರಿಗೂ ವ್ಯಾಕ್ಸಿನ್ ದೊರಕುವಂತಾಗಲು ಕ್ರಮ ಕೈಗೊಳ್ಳಲಾಗಿದೆ.

ವ್ಯಾಕ್ಸಿನ್ ವಿರುದ್ದ ಯಾವುದೇ ಸಂದೇಹ ಬೇಡ, ಹಲವು ಸುತ್ತಿನ ಪರೀಕ್ಷೆಯ ಬಳಿಕವೇ ಸುರಕ್ಷಿತ ಎಂದು ಇದೀಗ ಕೊರೊನಾ ವಿರುದ್ದ ಲಸಿಕೆ ಅಭಿಯಾನ ಆರಂಭವಾಗಿದೆ.ಇದೀಗ ಇರುವ ಸುರಕ್ಷತಾ ಕ್ರಮಗಳನ್ನು ಮುಂದುವರೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.ಮಾಸ್ಕ್,ಸಾಮಾಜಿಕ ಅಂತರ,ಕೈಯನ್ನು ಸ್ವಚ್ಚವಾಗಿಟ್ಟುಕೊಳ್ಳುವ ಅಭ್ಯಾಸವನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ಪಾಲಿಕೆ ಸದಸ್ಯ ರಾದ ನಯನ ಕೋಟ್ಯಾನ್,ಸರಿತ ಶಶಿಧರ್, ಶೋಭಾ ರಾಜೇಶ್,ಲಕ್ಷ್ಮೀ ಶೇಖರ್ ದೇವಾಡಿಗ,ಶ್ವೇತಾ ಪೂಜಾರಿ,ಶಂಶಾದ್,

ಜಿಲ್ಲಾ ಮಲೇರಿಯಾ ನಿಯಂತ್ರಣ ವಿಭಾಗದ ಡಿಎಂಒ ಡಾ. ನವೀನ್ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ,ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ದ ಡಾ.ಕತಿಜಾ ಶಲುಲಾ,ಆಡಳಿತ ವಿಭಾಗದ ಭಾಸ್ಕರ್ ಕೋಟ್ಯಾನ್,ಎಲ್ ಎಚ್ ಎ ವಿಜಯ, ಡಿಎಚ್ ಇಒ ಆಲಿಯಮ್ಮ ,ಸಿಟಿ ಪ್ರೋಗ್ರಾಂ ಮ್ಯಾನೇಜರ್ ಪಯಸ್ಬಿನಿ,ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬಂದಿಗಳು ಉಪಸ್ಥಿತರಿದ್ದರು.

ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿಯ ಒಟ್ಟು 100 ಮಂದಿಗೆ ಕೊರಿನಾ ಲಸಿಕೆ ಹಾಕಲಾಯಿತು.

ಮುಂಜಾಗ್ರತಾ ಕ್ರಮವಾಗಿ ಲಸಿಕೆ ನಿಗಾ ಘಟಕ,ಆಕ್ಸಿಜನ್ ವ್ಯವಸ್ಥೆ,ಅಂಬುಲೆನ್ಸ್ ಮತ್ತಿತರ ವ್ಯವಸ್ಥೆ ಕೈಗೊಳ್ಳಲಾಗಿತ್ತು.

Edited By : Manjunath H D
Kshetra Samachara

Kshetra Samachara

17/01/2021 10:08 am

Cinque Terre

11.2 K

Cinque Terre

0