ಕೊಲ್ಲೂರು: ಜಿಲ್ಲೆಯಾದ್ಯಂತ ಕೊರೋನಾ ಹೆಚ್ಚುತ್ತಿದ್ದರೂ ಪ್ರವಾಸಿಗರು ಮತ್ತು ಭಕ್ತರಿಗೆ ಯಾವುದೇ ನಿರ್ಬಂಧಗಳೂ ಸದ್ಯ ಇಲ್ಲ.ಜಿಲ್ಲೆಯಲ್ಲಿ ಪ್ರತಿನಿತ್ಯ ಕೊರೋನಾ ಮೂರಂಕಿಯಲ್ಲಿ ದಾಖಲಾಗುತ್ತಿದೆ.ಆದರೆ ಗಡಿಗಳಲ್ಲಿ ಚೆಕ್ ಪೋಸ್ಟ್ ಅಳವಡಿಸಿ ಪರಿಶೀಲನೆ ನಡೆಸುತ್ತಿರುವುದನ್ನು ಹೊರತುಪಡಿಸಿ ಯಾವುದೇ ನಿರ್ಬಂಧ ಜಿಲ್ಲೆಯಲ್ಲಿಲ್ಲ.
ಜಿಲ್ಲೆಯ ಹೆಸರಾಂತ ಶಕ್ತಿ ಕೇಂದ್ರ ಕೊಲ್ಲೂರಿನಲ್ಲಿ ಭಕ್ತರಿಗೆ ಮುಕ್ತಪ್ರವೇಶ ಇದ್ದು ಇವತ್ತು ಭಕ್ತರ ಸಂಖ್ಯೆ ಜಾಸ್ತಿ ಇತ್ತು.
ಮುಂಜಾಗ್ರತೆಯ ಹಿನ್ನಲೆಯಲ್ಲಿ ದ.ಕ ಜಿಲ್ಲೆಯ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಭಕ್ತರಿಗೆ ನಿರ್ಬಂಧ ಇದ್ದರೂ ,ಕೊಲ್ಲೂರಿಗೆ ಬರುವ ಭಕ್ತರ ಸಂಖ್ಯೆ ಸಾಕಷ್ಟು ಹೆಚ್ಚುತ್ತಿದೆ.
ಕೊರೋನಾ ಆತಂಕದ ನಡುವೆಯೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೇವರ ದರ್ಶನ ನಿರಾತಂಕವಾಗಿ ನಡೆದಿದೆ.
Kshetra Samachara
09/08/2021 03:29 pm