ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಟ ಮಣೂರು ಭಾಗದ 101 ವರ್ಷದ ಹಿರಿಯರಾದ ಶಾರದ ಬಾಯಿ ಕೇಶವ ಪಡಿಯಾರ್ ಇವರನ್ನು ಕೋಟ ಗ್ರಾಮ ಪಂಚಾಯತ್ ವತಿಯಿಂದ ಆರೋಗ್ಯ ಕ್ಷೇಮ ವಿಚಾರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಪಂಚಾಯತ್ ಸದಸ್ಯರಾದ ಲಲಿತಾ, ಶಿವರಾಮ ಶೆಟ್ಟಿ, ಪ್ರಶಾಂತ್ ಹೆಗ್ಡೆ, ಸಂತೋಷ್ ಪ್ರಭು, ಮಣೂರು ಅಂಗನವಾಡಿ ಕಾರ್ಯಕರ್ತೆ ಮರಿಯಾ, ರಮೇಶ್ ಪಡಿಯಾರ್, ವಿಜಯ ಪಡಿಯಾ,ಪಂಚಾಯತ್ ನ ವಿಕಲಚೇತನ ಪುನರ್ವಸತಿ ಕಾರ್ಯಾಗಾರ ಸಂಯೋಜಕ ಅಬೂಬ್ಬಕ್ಕ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
03/10/2022 10:03 pm