ಇಂದ್ರಾಳಿ ರೈಲು ನಿಲ್ದಾಣದಲ್ಲಿ ಬ್ಲೂಸ್ಟರ್ ಲಸಿಕೆ ನೀಡುವ ಕೇಂದ್ರಕ್ಕೆ ಇಂದು ಚಾಲನೆ ನೀಡಲಾಯಿತು. ರೈಲು ನಿಲ್ದಾಣದ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ರೈಲ್ವೆ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಲಸಿಕೆ ಹಾಕಿಸಲಾಯಿತು. ಕಾರ್ಯಕ್ರಮದಲ್ಲಿ ರೈಲ್ವೆ ಇನ್ಸ್ಪೆಕ್ಟರ್ ಮಧುಸೂದನ ಪಿ.ವಿ, ಆರಿಫ್, ಕೆ. ಎಸ್ ರಾಜು, ಭಾರತಿ ರೈಲ್ವೆ ಸ್ಟಾಪ್ ನರ್ಸ್, ಸಮಾಜ ಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು. ಅಲ್ಲದೇ ಲಸಿಕೆ ಪರಿಕರ ಸಾಗಿಸಲು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಉಚಿತವಾಗಿ ಆಂಬ್ಯುಲೆನ್ಸ್ ಸೇವೆ ಒದಗಿಸಿತು.
Kshetra Samachara
01/08/2022 04:54 pm