ಉಡುಪಿ: ಮಹಾಮಳೆಗೆ ತತ್ತರಿಸಿರುವ ಉಡುಪಿ ಜಿಲ್ಲೆಯಾದ್ಯಂತ ನೆರೆಯಲ್ಲಿ ಸಿಲುಕಿರುವ ಒಟ್ಟು 250ಕ್ಕೂ ಹೆಚು ಮಂದಿಯನ್ನು ಈ ತನಕ ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ನೆರೆಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಅವಲೋಕನ ಮತ್ತು ರಕ್ಷಣಾ ಕಾರ್ಯಾಚರಣೆ ವೀಕ್ಷಿಸಿದ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು.
ಉಡುಪಿ, ಕಾಪು ,ಬ್ರಹ್ಮಾವರ, ಕಾರ್ಕಳ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. NDRF ತಂಡದ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸೈಂಟ್ ಮೇರಿಸ್ ದ್ವೀಪದಲ್ಲಿ 10 ಮೀನುಗಾರರು ಸಿಲುಕಿದ್ದರು. ಮೀನುಗಾರಿಕೆಗೆ ತೆರಳಿದ್ದ ಅವರು ದ್ವೀಪದಲ್ಲಿ ಬಾಕಿಯಾಗಿದ್ದರು.
ಬೋಟ್ ಸಮಸ್ಯೆಯಾಗಿ ದ್ವೀಪದಲ್ಲಿ ತಂಗಿದ್ದ ಮೀನುಗಾರರನ್ನು ಕರಾವಳಿ ಕಾವಲು ಪಡೆ ಮೂಲಕ ರಕ್ಷಿಸಲಾಗಿದೆ.
ಸದ್ಯ, ನೆರೆಯಲ್ಲಿ ಸಿಲುಕಿರುವ ಎಲ್ಲರನ್ನೂ ರಕ್ಷಿಸಲಾಗಿದೆ.ಇನ್ನೂ ಎರಡು ದಿನ ರೆಡ್ ಅಲರ್ಟ್ ಇದೆ. NDRF ತಂಡ,ಅಗ್ನಿಶಾಮಕ ದಳ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನಿನ್ನೆ ರಾತ್ರಿಯಿಂದ ನಿದ್ದೆ ಮಾಡದೇ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ.
ಕೋಸ್ಟ್ ಗಾರ್ಡ್ ಜೊತೆಗೆ ಹೆಲಿಕಾಫ್ಟರ್ ಸೇವೆ ಕೂಡ ಇವತ್ತು ಲಭ್ಯವಾಗಲಿದೆ ಎಂದರು.
Kshetra Samachara
20/09/2020 04:01 pm