ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಒಮಿಕ್ರಾನ್ ಹಿನ್ನೆಲೆ; ಡಿ.28ರಿಂದ ಕಟೀಲು ಯಕ್ಷಗಾನ ಮೇಳ ಪ್ರದರ್ಶನ ಕಾಲಮಿತಿ

ಬಜಪೆ: ರಾಜ್ಯ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಯಕ್ಷಗಾನ ಮೇಳಗಳ ಪ್ರದರ್ಶನ ಡಿ.28 ರಿಂದ ಜ.7ರ ತನಕ ಕಾಲಮಿತಿಗೆ (ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರ ವರೆಗೆ) ಅನುಗುಣವಾಗಿ ನಡೆಯಲಿದೆ.

ಆದ್ದರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಭಕ್ತಾಭಿಮಾನಿಗಳು ಹಾಗೂ ಶ್ರೀ ಕಟೀಲು ಮೇಳಗಳ ಎಲ್ಲ ಸೇವಾದಾರರು ಸಹಕರಿಸಬೇಕಾಗಿ ಕಟೀಲು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಯಕ್ಷಗಾನ ಮೇಳಗಳ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

27/12/2021 02:07 pm

Cinque Terre

8.09 K

Cinque Terre

0

ಸಂಬಂಧಿತ ಸುದ್ದಿ