ಮುಲ್ಕಿ: ದಕ್ಷಿಣಕನ್ನಡ ಜಿಲ್ಲಾಡಳಿತದ ನಿರ್ದೇಶನದಂತೆ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದ್ದು ಮುಲ್ಕಿ ತಾಲೂಕು ಸ್ತಬ್ದಗೊಂಡಿದೆ.
ತಾಲೂಕು ವ್ಯಾಪ್ತಿಯಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ-ವಹಿವಾಟು ನಡೆದಿದ್ದು ಬಳಿಕ ಮೆಡಿಕಲ್ ಹಾಗೂ ಹೋಟೆಲ್ ಹೊರತುಪಡಿಸಿ ಎಲ್ಲಾ ಸ್ತಬ್ದಗೊಂಡಿದೆ.
ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಎಂದಿನಂತೆ ವಾಹನ ಸಂಚಾರ ಇದ್ದು ಸರಕಾರಿ ಹಾಗೂ ಖಾಸಗಿ ತಡೆರಹಿತ ಬಸ್ಸುಗಳು ಓಡಾಡಿದೆ. ಆದರೆ ಕಿನ್ನಿಗೋಳಿ-ಕಟೀಲು ಕಡೆ ಬಸ್ಸು ಸಂಚಾರ ಸ್ಥಗಿತಗೊಂಡಿದೆ.
ಕೊರೊನಾ ವೀಕೆಂಡ್ ಕರ್ಫ್ಯೂ ನಲ್ಲಿ ಬಸ್ಸು ನಿಲ್ದಾಣದಲ್ಲಿ ಭರ್ಜರಿ ಮೀನು ಮಾರಾಟ ಮಾಡುತ್ತಿದ್ದ ಟೆಂಪೋ ವ್ಯಾಪಾರಿಯನ್ನು ಪೊಲೀಸರು ತಡೆದಿದ್ದು ವಾಪಸ್ ಕಳಿಸಿದ್ದು ಕೆಲ ಹೊತ್ತು ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
ಕೊರೊನಾ ವೀಕೆಂಡ್ ಕರ್ಫ್ಯೂ ನಲ್ಲಿ ಅನಗತ್ಯ ದ್ವಿಚಕ್ರ ವಾಹನ ತಿರುಗಾಟಕ್ಕೆ ಬ್ರೇಕ್ ಹಾಕಬೇಕಾದ ಪೊಲೀಸರು ವ್ಯಾಪಾರಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ
Kshetra Samachara
04/09/2021 07:41 pm