ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಸಕರ ಆಕ್ಷೇಪದ ನಡುವೆಯೂ ಉಡುಪಿಯಲ್ಲಿ ಇಂದಿನಿಂದ ವೀಕೆಂಡ್ ಕರ್ಪ್ಯೂ ಜಾರಿ!

ಉಡುಪಿ: ಉಡುಪಿ ಶಾಸಕ ರಘುಪತಿ ಭಟ್ ಅವರ ತೀವ್ರ ಆಕ್ಷೇಪ ಮತ್ತು ಜನರ ಅಸಮಾಧಾನದ ಮಧ್ಯೆಯೇ ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ವೀಕೆಂಡ್ ಕರ್ಪ್ಯೂ ಜಾರಿಯಾಗುತ್ತಿದೆ.

ಈ ಸಂಬಂಧ ಇವತ್ತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಕೂರ್ಮಾ ರಾವ್ ,ಜಿಲ್ಲೆಯಲ್ಲಿ ಪಾಸಿಟಿವಿಟಿ ದರ 1.30 ಆಸುಪಾಸಿನಲ್ಲಿದೆ.ರಾಜ್ಯದಲ್ಲಿ ಇನ್ನೂ ಕಡಿಮೆ ಇದೆ.ಹೀಗಾಗಿ ಹೊಸ ಗೈಡ್ ಲೈನ್ಸ್ ಪ್ರಕಾರ ವೀಕೆಂಡ್ ಕರ್ಪ್ಯೂ ಹಾಕುತ್ತಿದ್ದೇವೆ.ಸರಕಾರದ ಹೊಸ ಕೋವಿಡ್ ಮಾನದಂಡದ ಪ್ರಕಾರ ಈ ಆದೇಶ ಜಾರಿಗೊಳಸುತ್ತಿದ್ದೇವೆ.ಮುಂದೆ ಈ ನಿಯಮಾವಳಿ ಪರಿಷ್ಕರಣೆ ಆಗಲಿದೆ ಎಂದು ಹೇಳಿದ್ದಾರೆ.

ವೀಕೆಂಡ್ ಕರ್ಪ್ಯೂ ಸೆಪ್ಟೆಂಬರ್ ಹದಿಮೂರರ ತನಕ ಇರಲಿದೆ.ಮುಂದೆ ಆಗುವ ನಿರ್ಧಾರವನ್ನು ತಿಳಿಸಲಾಗುವುದು.ಅಗತ್ಯ ವಸ್ತು ಮತ್ತು ಸೇವೆಗಳಿಗೆ ನಾಳೆ ಮತ್ತು ನಾಡಿದ್ದು ಬೆಳಿಗ್ಗೆ ಐದರಿಂದ ಮದ್ಯಾಹ್ನ ಎರಡು ಗಂಟೆ ತನಕ ಕಾಲಾವಕಾಶ ಇದೆ ,ಜನರು ಸಹಕಾರ ನೀಡಬೇಕು ಎಂದು ಹೇಳುದ್ದಾರೆ. ವಾರಾಂತ್ಯ ಕರ್ಫ್ಯೂ ಗಡಿ ಜಿಲ್ಲೆಗಳಲ್ಲಿ ಈ ಮೊದಲು ಹಾಕಲಾಗಿತ್ತು, ಸದ್ಯ ಹೆಚ್ಚುವರಿಯಾಗಿ ನಮ್ಮ ಜಿಲ್ಲೆಯಲ್ಲೂ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/09/2021 02:55 pm

Cinque Terre

36.01 K

Cinque Terre

7